ಶಿರಸಿ: ಜಿಲ್ಲೆಯಾದ್ಯಂತ ಕಳೆದ ಹಲವಾರು ದಿನಗಳಿಂದ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಥಮಿಕ-ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ,ಅನುದಾನರಹಿತಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರ/ಸಿ.ಆರ್.ಪಿಯವರ ಗಮನಕ್ಕೆ: ಜಿಲ್ಲೆಯಲ್ಲಿ ಅತೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಕಾರವಾರರವರ ಸೂಚನೆಯ ಮೇರೆಗೆ ನಾಳೆ ದಿನಾಂಕ:06-08-2019ರಂದು ಮಂಗಳವಾರ ಕುಮಟಾ ತಾಲೂಕಿನ ಎಲ್ಲಾ ಶಾಲೆಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ.

RELATED ARTICLES  ಲೈಫ್ ಲೈನ್ ಸಂಚಾರಿ ರೈಲು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹೇಕ್ ಸಿಕ್ಕಾ ಅವರಿಗೆ ರೋಟರಿಯಿಂದ ಅಭಿನಂದನೆ!

ಆ.18 ರವಿವಾರ ರಂದು ಕಡ್ಡಾಯವಾಗಿ ಶಾಲೆ ನಡೆಸಿ ಶಾಲಾ ಕಾರ್ಯ ನಿರ್ವಹಣೆಯ ದಿನಗಳನ್ನು ಸರಿದೂಗಿಸಿಕೊಳ್ಳುಲು ಸೂಚನೆ ನೀಡಲಾಗಿದೆ.