ಕುಮಟಾ : ನಿನ್ನೆ ಸುರಿದ ಬಾರಿ ಗಾಳಿ ಮಳೆಗೆ ಕುಮಟಾ ತಾಲೂಕಿನ ಬರ್ಗಿಯಲ್ಲಿ ಮನೆಯ ಮೇಲ್ಚಾವಣಿ ಮತ್ತು ಕೊಟ್ಟಿಗೆಯ ಮೇಲ್ಚಾವಣಿ ಹಾರಿದ ಘಟನೆ ರಾತ್ರಿ 12 ಘಂಟೆಗೆ ನಡೆದಿದೆ.
ಭರ್ಗಿ ನಿವಾಸಿಯಾದ ನಾಗವೇಣಿ ಪರಮೇಶ್ವರ ಪಟಗಾರ ಮನೆ ಹಾಗೂ ಕೊಟ್ಟಿಗೆ ಹಾನಿಯಾಗಿದ್ದು ಮಾದೇವ ಪಟಗಾರ ಅವರ ಕೊಟ್ಟಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಮಧ್ಯರಾತ್ರಿ ಬೀಸಿದ ಗಾಳಿ ಹಾಗೂ ಮಳೆಗೆ ಮೇಲ್ಚಾವಣಿ ಹಾರಿಹೋಗಿದ್ದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಹಶೀಲ್ದಾರ ಕುಮಟಾ ಅವರಿಗೆ ದೂರವಾಣಿ ಮೂಲಕ ಮುಂದಿನ ಅಗತ್ಯ ಕ್ರಮವನ್ನ ಶೀಘ್ರದಲ್ಲಿ ನೆರವೇರಿಸಲು ತಿಳಿಸಲಾಗಿದೆ,ಪ್ರದೀಪ ದೇವರಬಾವಿ, ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯ್ಕ್,ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಗುನಗಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕ ಪಂಚಾಯತ್ ಅಧ್ಯಕ್ಷರಾದ ವಿಜಯ ಪಟಗಾರ, ತಾಲೂಕ ಪಂಚಾಯತ್ ಸದಸ್ಯ ಈಶ್ವರ ನಾಯ್ಕ್,ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮ ಪಟಗಾರ ,ನಾರಾಯಣ್ ನಾಯಕ ,ವಾಮನ ಪಟಗಾರ್,ಶೇಷ ಪಟಗಾರ್,ಹಾಗೂ ಹಲವರು ಉಪಸ್ಥಿತರಿದ್ದರು.