ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಹೊಸ ಹೀರೋ ಆರ್ಯನ್ ನಾಯಕತ್ವದ ಮುಂಬರುವ ‘ಫ್ಯಾನ್’ ಸಿನಿಮಾಕ್ಕೆ ದರ್ಶಿತ್ ಭಟ್ ನಿರ್ದೇಶಕರು. ದರ್ಶಿತ್ ಭಟ್ ಅವರು ಈ ಮೊದಲು ‘ಮದುಮಗಳು’ ಮತ್ತು ‘ದೊಡ್ಮನೆ ಸೊಸೆ’ ಸೀರಿಯಲ್‌ಗಳನ್ನು ನಿರ್ದೇಶಿಸಿದ್ದು, ಫ್ಯಾನ್ ಅವರ ಮೊದಲ ನಿರ್ದೇಶನದ ಸಿನಿಮಾ. ಹೊಸ ಹುಡುಗ ಆರ್ಯನ್ ಅವರಿಗೆ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ನಾಯಕಿ.

ಸ್ಯಾಂಡಲ್‌ವುಡ್‌ನಲ್ಲಿ ಎರಡು ಕೆಟಗರಿಗಳಲ್ಲಿ ಹೊಸಬರ ಸಿನಿಮಾಗಳನ್ನು ಹೆಸರಿಸಬಹುದು. ಒಂದು, ಸಖತ್ ಸೌಂಡ್ ಮಾಡುವ ಮೂಲಕ ಸೆಟ್ಟೇರಿ ಆ ಬಳಿಕ ಪ್ರೀ-ಪ್ರೊಡಕ್ಷನ್, ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ತೆರಗೆ ಬರುವುದು. ಇನ್ನೊಂದು, ಸ್ವಲ್ಲ ಅಥವಾ ಏನೂ ಸದ್ದು-ಗದ್ದಲವಿಲ್ಲದೇ ಪ್ರೀ-ಪ್ರೊಡಕ್ಷನ್ ಹಂತದಿಂದ ಹಿಡಿದು ಪೋಸ್ಟ್ ಪ್ರೊಡಕ್ಷನ್ ಹಂತ ಮಗಿಸಿಕೊಂಡು ಆ ಬಳಿಕ ಸೌಂಡ್ ಮಾಡತೊಡಗುವುದು. ಎರಡನೇ ಕೆಟಗರಿಗೆ ಸೇರಿದ ಸಿನಿಮಾ ಎನ್ನಬಹುದಾದ ‘ಫ್ಯಾನ್’ ಇದೀಗ ತೆರೆಗೆ ಬರಲು ಸಜ್ಜಾಗಿದ್ದು, ಇತ್ತೀಚೆಗೆ ನಿಧಾನವಾಗಿ ಸೌಂಡ್ ಮಾಡತೊಡಗಿದೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಹೊಸ ಹೀರೋ ಆರ್ಯನ್ ನಾಯಕತ್ವದ ಮುಂಬರುವ ‘ಫ್ಯಾನ್’ ಸಿನಿಮಾಕ್ಕೆ ದರ್ಶಿತ್ ಭಟ್ ನಿರ್ದೇಶಕರು. ಅವರು ಈ ಮೊದಲು ‘ಮದುಮಗಳು’ ಮತ್ತು ‘ದೊಡ್ಮನೆ ಸೊಸೆ’ ಸೀರಿಯಲ್‌ಗಳನ್ನು ನಿರ್ದೇಶಿಸಿದ್ದು, ಫ್ಯಾನ್ ಅವರ ಮೊದಲ ನಿರ್ದೇಶನದ ಸಿನಿಮಾ. ಹೊಸ ಹುಡುಗ ಆರ್ಯನ್ ಅವರಿಗೆ ಈ ಚಿತ್ರದಲ್ಲಿ ಅದ್ವಿತಿ ಶೆಟ್ಟಿ ನಾಯಕಿಯಾಗಿದ್ದಾರೆ. ಅಂದಹಾಗೆ, ಚಿತ್ರದ ನಾಯಕ್ ಆರ್ಯನ್ ಲೇಔಟ್ ಕೃಷ್ಣಪ್ಪನವರ ಸಂಬಂಧಿ ಎನ್ನಲಾಗಿದೆ.

RELATED ARTICLES  ಮದುವೆಯ ದಿನವೇ ವಧುವಿನ ಆಭರಣ ಕದ್ದಿದ್ದಾಕೆ ಅರೆಸ್ಟ್

ಫ್ಯಾನ್ ಸಿನಿಮಾ ದಿವಂಗತ ನಟ-ನಿರ್ದೇಶಕ ಶಂಕರ್‌ ನಾಗ್ ಅವರ ಜೀವನ ಚರಿತ್ರೆಯಿಂದ ಪ್ರೇರಿತವಾದ ಸಿನಿಮಾ ಎನ್ನಲಾಗಿದೆ. ಅಷ್ಟೇ ಏಕೆ, ಈ ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ಶಂಕರ್‌ ನಾಗ್ ಅಭಿಮಾನಿಯೊಬ್ಬನ ಕಥೆಯೇ ಆಗಿದೆ ಎನ್ನಲಾಗಿದೆ. ಆದರೆ, ಇದು ಶಂಕರ್‌ ನಾಗ್ ಅಭಿಮಾನಿಯ ಜೀವನ ಚರಿತ್ರೆಯೋ ಅಥವಾ ಈ ‘ಫ್ಯಾನ್’ ಸಿನಿಮಾದ ನಾಯಕ ಶಂಕರ್‌ ನಾಗ್ ಫ್ಯಾನ್ ಆಗಿದ್ದು, ಸಿನಿಮಾ ಕಥೆ ಬೇರೆಯೇ ಇದೆಯೋ ಎಂಬ ಮಾಹಿತಿ ಇನ್ನೂ ಸೀಕ್ರೆಟ್ ಆಗಿದೆ.
ನಿರ್ದೇಶಕ ದರ್ಶಿತ್ ಭಟ್ ಅವರು ತಮ್ಮ ‘ಫ್ಯಾನ್’ ಸಿನಿಮಾ ಬಗ್ಗೆ ಮಾತನಾಡುತ್ತ “ನಾನು ಈ ಮೊದಲು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದೇನೆ… ಆ ಬಳಿಕ, ಸಿನಿಮಾಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪಕ್ಕಾ ಮಾಡಿಕೊಂಡು ಈ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದೇನೆ… ನಾನು ಮೂಲತಃ ನಟ-ನಿರ್ದೇಶಕ ಶಂಕರ್ ನಾಗ್ ಅವರ ಊರಿನವನು… ಶಂಕರ್‌ ನಾಗ್ ಅವರ ದೊಡ್ಡ ಅಭಿಮಾನಿ ಕೂಡ…

ಫ್ಯಾನ್ ಸಿನಿಮಾ‌ ಶಂಕರ್ ನಾಗ್ ಅವರ ಅಭಿಮಾನಿಯ ಕಥೆನೇ ಆಗಿದೆ… ಮೊದಲ ಬಾರಿಗೆ ಉತ್ತರ ಕನ್ನಡದ ಭಾಷೆಯನ್ನು ನಮ್ಮ ಸಿನಿಮಾದಲ್ಲಿ ಶೇ. 80 ರಷ್ಟು ಬಳಸಲಾಗಿದೆ… ಅಷ್ಟೇ ಅಲ್ಲ, ಚಿತ್ರದ ಹೆಚ್ಚಿನ ಭಾಗವನ್ನು ಉತ್ತರ ಕನ್ನಡ ಜಿಲ್ಲೆ, ಹೊನ್ನಾವರದ ಸುತ್ತಮುತ್ತವೇ ಮಾಡಲಾಗಿದೆ… ಕಥೆಯ ಅಗತ್ಯಕ್ಕೆ ತಕ್ಕಂಥೆ ಹೊನ್ನಾವರದ ಹಲವು ಸ್ಥಳಗಳಲ್ಲಿ ಶೂಟಿಂಗ್ ಮಾಡಿದ್ದು, ಪ್ರೇಕ್ಷಕರಿಗೆ ಸಿನಿಮಾ ಫುಲ್ ತಾಜಾ ಅನುಭವ ನೀಡಲಿದೆ..” ಎಂದಿದ್ದಾರೆ.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ನಲ್ಲಿ ಗಾಂಧಿ ಹಾಗೂ ಶಾಸ್ತ್ರೀ ಜನ್ಮದಿನಾಚರಣೆ ಆಚರಣೆ

ಎಸ್‌ಎಲ್‌ಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ‘ಪ್ಯಾನ್’ ಸಿನಿಮಾ ನಿರ್ಮಾಣವಾಗಿದ್ದು, ಶ್ರೀಮತಿ ಸವಿತಾ ಈಶ್ವರ್ ಈ ಸಿನಿಮಾದ ನಿರ್ಮಾಪಕರು. ರಾಜಮುಡಿ ದತ್ತಾ ಕಾರ್ಯಕಾರಿ ನಿರ್ಮಾಪಕರಾಗಿರುವ ‘ಫ್ಯಾನ್’ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಬಲವಳ್ಳಿ ದರ್ಶಿತ್ ಭಟ್ ನಿರ್ದೇಶನ ಮಾಡಿದ್ದಾರೆ. ಪಿ ಪವನ್ ಕುಮಾರ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಗಣಪತಿ ಭಟ್ ಸಂಕಲನವಿರುವ ಈ ಚಿತ್ರದಲ್ಲಿ ಆರ್ಯನ್ ನಾಯಕ ಮತ್ತು ಅದ್ವಿತಿ ಶೆಟ್ಟಿ ನಾಯಕಿ.

ಸಮೀಕ್ಷಾ ‘ಅತಿಥಿ ಪಾತ್ರ’ದಲ್ಲಿ ಕಾಣಿಸಿಕೊಂಡಿರುವ ‘ಫ್ಯಾನ್’ ಚಿತ್ರದಲ್ಲಿ ವಿಜಯಕಾಶಿ, ಮಂಡ್ಯ ರಮೇಶ್, ನವೀನ್ ಡಿ ಪಡೀಲ್, ರವಿ ಭಟ್, ರಘು ಪಾಂಡೇಶ್ವರ್, ವಿಟ್ಲ ಮಂಗೇಶ್ ಭಟ್, ವಿಜಯಲಕ್ಷ್ಮಿ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಸ್ವಾತಿ, ಪೃಥ್ವಿ, ಸಾಗರ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ದರ್ಶಿತ್ ಭಟ್ ಸಾಹಿತ್ಯ, ವಿಜಯ್ ಪ್ರಕಾಶ್, ಸಂಜಿತ್ ಹೆಗಡೆ, ಕಾರ್ತಿಕ್, ಅನನ್ಯಾ ಭಟ್, ಅಂಕಿತ ಕುಂದು ಗಾಯನದಲ್ಲಿ ಈ ‘ಫ್ಯಾನ್’ ಚಿತ್ರದ ಹಾಡುಗಳು ಮೂಡಿಬಂದಿವೆ. ಈ ಫ್ಯಾನ್ ಚಿತ್ರವು ಇದೇ ತಿಂಗಳು 23 ರಂದು ಬಿಡುಗಡೆಯಾಗಲಿದೆ.