ಹೊನ್ನಾವರ: ಇಡೀ ಉತ್ತರ ಕನ್ನಡ ಮಳೆಯಿಂದ ತತ್ತರಿಸಿದೆ. ಹೊನ್ನಾವರದ ಜನತೆಯ ಸ್ಥಿತಿಯೂ ಹೊರತಲ್ಲ. ಹಲವಾರು ಗಂಜಿ ಕೇಂದ್ರ ತೆರೆಯಲಾಗಿದ್ದು ಜನತೆಗೆ ವ್ಯವಸ್ಥೆ ಮಾಡಲಾಗಿದೆ.
ಹೊನ್ನಾವರ ಡಿಸ್ಟ್ರೀಕ್ ಇಂಚಾರ್ಜ ಪ್ರಮೋದ ದೇಸಾಯಿ,ಡಿಸ್ಟ್ರಿಕ್ ಸರ್ವಿಸ್ ಮೆನೆಂಜರ್ ವೆಂಕಟೇಶ ನಾಯ್ಕ,ಸ್ಟಾಪ್ ನರ್ಸ ಸಹನಾ ನಾಯ್ಕ,ಚಾಲಕ ಗೋಪಾಲ ನಾಯ್ಕ ಇವರೆಲ್ಲರು ಸೇರಿ ಗಂಜಿಕೇಂದ್ರದಲ್ಲಿ ವಾಸ್ಥವ್ಯ ಹೂಡಿರುವ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಿದ್ದಾರೆ.
ಇದೇ ಸಂದರ್ಭದಲ್ಲಿ 108 ಅಂಬುಲೆನ್ಸ ತಂಡ ಹೊನ್ನಾವರ ತಾಲೂಕಿನ ನೆರೆಪಿಡಿತ ಪ್ರದೇಶವಾದ ಗುಂಡಬಾಳಾದ ಪ್ರತಿಯೊಂದು ಗಂಜಿಕೇಂದ್ರಕ್ಕೆ ತೆರಳಿ ಸಂತ್ರಸ್ಥರಿಗೆ ಚಿಕಿತ್ಸೆ ನೀಡಿ ಆರೋಗ್ಯ ವಿಚಾರಿಸಿದರು.
ಜನತೆಗೆ ಗಂಜಿ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದ್ದು. ಆರೋಗ್ಯ ಇಲಾಖೆಯ ಕ್ರಮಕ್ಕೂ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.