ರಾಜ್ಯಾದ್ಯಂತ ಎಡೆಬಿಡದೆ ಉರಿಯುತ್ತಿರುವ ಮಳೆಯಿಂದ ರಾಜ್ಯದಲ್ಲಿ ನೆರೆ ಆವರಿಸಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಭಾರೀ ಮಳೆಯಿಂದ ಅನೇಕ ಪ್ರದೇಶಗಳು ಜಲಾವೃತವಾಗಿದೆ.

ಸಂಸತ್ ಅಧಿವೇಶನವು ಮುಕ್ತಾಯವಾಗಿದ್ದು, ದಿನಾಂಕ 09-08-2019ರಂದು ಕಾರವಾರ ಹಾಗೂ ಅಂಕೋಲಾ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಮಾನ್ಯ ಸಂಸದರಾದ ಶ್ರೀ. ಅನಂತಕುಮಾರ ಹೆಗಡೆಯವರು ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ಲಭಿಸಿದೆ.

RELATED ARTICLES  ಪಿ.ಎಮ್ ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ

ಈಗಾಗಲೇ ಸಂಸದರು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು, ಮುನ್ನೆಚ್ಚರಿಕೆಯಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಚರ್ಚಿ ನಡೆಸಿರುತ್ತಾರೆ.

ಸದ್ಯದ ವಿದ್ಯಮಾನ ಹಾಗೂ ಪರಿಸ್ಥಿತಿ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್.ಯಡಿಯುರಪ್ಪನವರ ಜೊತೆ ಚರ್ಚಿಸಿದ್ದು, ತುರ್ತು ಅಗತ್ಯ ಪರಿಹಾರ ನೀಡುವಂತೆ ವಿನಂತಿಸಿರುತ್ತಾರೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯನ್ನು ಕಳುಹಿಸಿಕೊಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಕೋರಲಾಗಿದೆ.

RELATED ARTICLES  ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಸ್ಥಾನಕ್ಕೆ ಡಾ.ಶ್ರೀಧರ ಗೌಡ ಉಪ್ಪಿನ ಗಣಪತಿ ಸ್ಪರ್ಧೆ ?