ನಿರಂತರ ಮಳೆಯಿಂದ ಕರಾವಳಿಯಲ್ಲಿ ನೆರೆಹಾವಳಿ ಉಂಟಾಗಿದ್ದು ಈ ಸಂದರ್ಭದಲ್ಲಿ ಸರಕಾರವು ಸಕ್ರಿಯವಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು ಅಗತ್ಯ ನೆರವನ್ನು ನೀಡಲಾಗುತ್ತಿದೆ.ತಾನು ಹಗಲಿರುಳೆನ್ನದೇ ಪ್ರತಿಯೊಂದು ಸ್ಥಳಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇನೆ.ಈ ಸಂಸದರು ಈ ಸಂದರ್ಭದಲ್ಲಿ ಸ್ಪಂದಿಸುತ್ತಿಲ್ಲ ಎಂದು ಕೆಲವರು ಮಿಥ್ಯಾರೋಪ ಮಾಡುತ್ತಿದ್ದು.ಸರಿಯಾಗಿ ವಿಷಯವನ್ನು ಗ್ರಹಿಸದೇ ಈ ರೀತಿ ಆರೋಪಿಸುವುದು ಸರಿಯಲ್ಲ ಇದನ್ನು ನಾನು ಖಂಡಿಸುತ್ತೇನೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿಯವರು ಹೇಳಿದ್ದಾರೆ.

RELATED ARTICLES  ಮಣ್ಣಿನಲ್ಲಿ‌ ಹೂತಿಡಲಾಗಿತ್ತು ಗೋವಾ ಸಾರಾಯಿ: ಅಂಕೋಲಾದಲ್ಲಿ ಕಾರ್ಯಾಚರಣೆಯಲ್ಲಿ ಬಯಲಾಯ್ತು ಪ್ರಕರಣ

ಎಲ್ಲರಿಗೂ ಗೊತ್ತಿರುವ ಹಾಗೆ ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲ ಸಂಸದರು ಅದರಲ್ಲಿ ಭಾಗವಹಿಸಿ ಐತಿಹಾಸಿಕ ನಿರ್ಣಯವನ್ನು ಮಾಡಿದ್ದಾರೆ. ದೆಹಲಿಯಿಂದಲೇ ಮಾನ್ಯ ಸಂಸದರು ತನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡು ಅಗತ್ಯನಿರ್ದೇಶನ ನೀಡುತ್ತಿದ್ದರು.ನಾನಾಗಲಿ ಕಾರವಾರ ಹಾಗೂ ಭಟ್ಕಳ ಶಾಸಕರಾಗಲಿ ಹಗಲಿರುಳು ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ಶ್ರಮಿಸುತ್ತಿದ್ದೇವೆ ಟೀಕಾರರಿಗೆ ಇವಾವೂ ಕಣ್ಣಿಗೆ ಬೀಳುತ್ತಿಲ್ಲವೇ? 
ಮಾನ್ಯ ಅನಂತಕುಮಾರ ಹೆಗಡೆಯವರು ನಾಳೆ ಹಾಗೂ ನಾಡಿದ್ದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. 
ಇಂಥ ಸಂದರ್ಭದಲ್ಲಿ ಬರಿದೇ ಟೀಕೆಮಾಡಿ ಕಾಲಹರಣ ಮಾಡುವ ಬದಲು ಜನತೆಗೆ ಸ್ಪಂದಿಸಿ .ದೇವರು ಅವರಿಗೆ ಒಳ್ಳೆಯಬುದ್ಧಿ ನೀಡಲಿ ಎಂದು ಅವರು ಹೇಳಿದ್ದಾರೆ.

RELATED ARTICLES  ಕರಾವಳಿ ಉತ್ಸವದಲ್ಲಿ ಪ್ರಥಮ ಬಾರಿ ಪೆಂಟ್ ಬಾಲ್ ಪಂದ್ಯಾವಳಿ ; ಪಿ.ಕೆ. ಪ್ರಕಾಶ್