ನೂತನ ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶ್ರೀರಾಮಚಂದ್ರಾಪುರಮಠಕ್ಕೆ ಭೇಟಿ ನೀಡಿ ಸ್ವರ್ಣಮಂಟಪದಲ್ಲಿ ವಿರಾಜಮಾನವಾದ ಅಗಸ್ತ್ಯಮುನಿ ಸಂಪೂಜಿತ ಶ್ರೀರಾಮಾದಿ ವಿಗ್ರಹಗಳು, ಅನ್ವರ್ಥ ಚಂದ್ರಮೌಳೀಶ್ವರ, ಶ್ರೀರಾಜರಾಜೇಶ್ವರ್ಯಾದಿ ಶ್ರೀಕರಾರ್ಚಿತ ದೇವತಾ ದಿವ್ಯ ಸಾನ್ನಿಧ್ಯದ ದರ್ಶನಾಶೀರ್ವಾದ ಪಡೆದು ಭೀಕರವಾದ ಮಳೆಯಿಂದ ಉಂಟಾಗಿರುವ ನೆರೆ ಸಮಸ್ಯೆ ಬಗ್ಗೆ ಪ್ರಾರ್ಥಿಸಿ, ನಾಡಿನ ಜನತೆಗೆ ಕ್ಷೇಮವನ್ನು ಪ್ರಾರ್ಥಿಸಿದರು.

RELATED ARTICLES  ಕುಮಟಾದಲ್ಲೂ ಲಭ್ಯ ದಾವಣಗೆರೆ ಸ್ಪೆಶಲ್ ಬೆಣ್ಣೆ ದೋಸೆ
8b291448 e9b3 4dc3 941e 707af6d86e1e

ಆನಂತರ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿಶೇಷವಾಗಿ ನಾಡಿನಲ್ಲಿ ಉಂಟಾಗಿರುವ ನೆರೆ ಸಮಸ್ಯೆಯ ಕುರಿತಾಗಿ ಅವರು ಪ್ರಾರ್ಥಿಸಿದರು ಎಂದು ತಿಳಿದುಬಂದಿದೆ.

RELATED ARTICLES  ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರಿಗೆ ಗೋಕರ್ಣ ಗೌರವ