ಕುಮಟಾ: ಇಲ್ಲಿಯ ನೆರೆ ಪೀಡಿತ ಪ್ರದೇಶಗಳಾದ ಮಾಸೂರು ಹಾಗೂ ತೆಪ್ಪ ಭಾಗಗಳಿಂದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಶಿಕ್ಷಕ ಸಿಬ್ಬಂದಿಗಳು ತಮ್ಮ ಶಾಲೆಗೆ ಬರುತ್ತಿರುವ ಮಕ್ಕಳ ಮನೆಗೆ ಭೇಟಿ ನೀಡಿ ಅವರ ಪಾಲಕರೊಂದಿಗೆ ಮಳೆಯ ಪ್ರತಿಕೂಲ ಪರಿಣಾಮಗಳ ಕುರಿತು ವಿಚಾರಿಸಿದರು. ವಾರದಿಂದ ರಜೆಯಿದ್ದು, ಮಕ್ಕಳು ಶಾಲೆಯಿಂದ ಹೊರಗಿರುವುದೂ ತಮಗೆ ಸಮಸ್ಯೆಯಾಗಿದೆ ಪಾಲಕರು ಅಭಿಪ್ರಾಯಪಟ್ಟರು. ಮಕ್ಕಳ ಅಭ್ಯಾಸ ಮತ್ತು ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಶಿಕ್ಷಕರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ತೆಪ್ಪ ಗಂಜಿ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿಯ ನೋಡಲ್ ಅಧಿಕಾರಿ ದೇವರಾಯ ನಾಯಕ ಮತ್ತು ಸಿ.ಆರ್.ಪಿ. ಪ್ರದೀಪ ನಾಯಕ, ಮುಖ್ಯಾಧ್ಯಾಪಕ ಹರೀಶ ಪಟಗಾರ ಮೊದಲಾದವರೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಹಶಿಕ್ಷಕರಾದ ಅನಿಲ್ ರೊಡ್ರಿಗೀಸ್, ಕಿರಣ ಎಂ. ಪ್ರಭು, ಪ್ರಶಾಂತ ಗಾವಡಿ ಶಾಲೆಯ ಪರವಾಗಿ ಲಘು ಆಹಾರ ವಿತರಿಸಿ ಬೇಗ ಶಾಲೆ ಪ್ರಾರಂಭವಾಗಬಹುದೆಂದು ತಿಳಿಸಿದರು.

RELATED ARTICLES  ಜೆಡಿಎಸ್ ಗೆ ಸೇರ್ಪಡೆಯಾದ ಹಲವು ಮೀನುಗಾರ ಮುಖಂಡರು.