ಶಿರಸಿ : ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣವಾದ ‘ಹಬ್ಬ’ ಹಾಗೂ ‘ಮೇಳ’ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿರುವ ಶಿರಸಿಯ ಟಿ.ಎಸ್.ಎಸ್. ಸುಪರ್‍ಮಾರ್ಕೆಟ್‍ನಲ್ಲಿ ಇದೀಗ ಇನ್ನೊಂದು ವಿನೂತನ ಮೇಳವನ್ನು ಆಯೋಜಿಸಲಾಗಿದೆ. ಅದೇ ದಿನಾಂಕ:10.08.2019ರಂದು ಹಮ್ಮಿಕೊಳ್ಳಲಾಗಿರುವ “ಚಕ್ಲಿ ಕಂಬಳ”. ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಕೈ ಚಕ್ಕುಲಿ ತಯಾರಿಕೆಯಲ್ಲಿ ಹಾಗೂ ಸವಿಯುವುದರಲ್ಲಿ ಪ್ರಾವೀಣ್ಯತೆ ಹೊಂದಿರುವವರಿಗೆ ಇದೊಂದು ಸದವಕಾಶವಾಗಿದೆ.

RELATED ARTICLES  ಸಂಗೀತದಲ್ಲಿ ಸಾಧನೆ ಮಾಡಿ ಚಿನ್ನದ ಪದಕ‌ ಪಡೆದ ಸಂಗೀತಾ

ಗಣೇಶ ಚತುರ್ಥಿ ಹಬ್ಬದ ಎದುರಿನಲ್ಲಿ ಸಾಮಾನ್ಯವಾಗಿ ಮನೆಮನೆಗಳಲ್ಲಿ ನಡೆಯುವ ಚಕ್ಲಿ ಕಂಬಳದ ವಾತಾವರಣವನ್ನು ಟಿ.ಎಸ್.ಎಸ್.ನ ವ್ಯಾಪಾರಿ ಅಂಗಳದಲ್ಲಿ ಮೂಡಿಸಲು ಸರ್ವ ಸಿದ್ಧತೆಗಳು ನಡೆದಿದ್ದು, ದಿನಾಂಕ:10.08.2019ರಂದು ಸಂಜೆ 5 ಘಂಟೆಯಿಂದ ಕೈಚಕ್ಕುಲಿಯ ಜೊತೆಗೆ ಮಟ್ಟಿನ ಚಕ್ಕುಲಿ ಹಾಗೂ ಚಹಾ ಮತ್ತು ಕಷಾಯ ಕೂಡ ಸವಿಯಲು ಲಭ್ಯವಿರುತ್ತವೆ. ಈ ಕೈಚಕ್ಲಿ ಕಂಬಳದಲ್ಲಿ ಭಾಗವಹಿಸಲು ಅಥವಾ ಮುಂಚಿತವಾಗಿ ಚಕ್ಕುಲಿಯನ್ನು ತಯಾರಿಸಿ ಕೊಡಲು ಕೂಡ ಅವಕಾಶವಿದ್ದು, ಆಸಕ್ತರು ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಅಥವಾ ಮೊಬೈಲ್ ಸಂಖ್ಯೆ 8105871924 ಸಂಪರ್ಕಿಸಬಹುದಾಗಿದೆ ಎಂದು ಟಿ.ಎಸ್.ಎಸ್. ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಶ್ರೀಪಾದ ಭಟ್ಟರಿಗೆ 'ಅಭಿನಯ ಭಾರತಿ' ರಂಗ ಪ್ರಶಸ್ತಿ