ಭಟ್ಕಳ : “ಪದವಿ ಜೀವನವು ನಿಮ್ಮ ಭವಿಷ್ಯಕ್ಕೆ ಭದ್ರಬುನಾದಿ ಹಾಕುವ ಸಮಯ, ಯಾವುದೇ ರಾಜಕೀಯ ಶಕ್ತಿ ನಿಮ್ಮ ಯಶಸ್ಸನ್ನು ನಿರ್ಧರಿಸುವುದಿಲ್ಲ” ಎಂದು ಇಡಗುಂಜಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ವಿ. ನಾಯಕ್ ಹೇಳಿದರು. ನಗರದ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಜರುಗಿದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ನಿರ್ಣಯ, ಭಕ್ತಿ ಮತ್ತು ತ್ಯಾಗ ಯಶಸ್ಸನ್ನ ಕಾಣಲು ಬಹುಮುಖ್ಯವಾಗಿ ಬೇಕು, ಇವುಗಳ ಜೊತೆಗೆ ನೈತಿಕತೆಯನ್ನು ಮೈಗೂಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಕೆನರ ಬ್ಯಾಂಕ್ ಶಿರೂರು ಘಟಕದ ಮುಖ್ಯ ಪ್ರಭಂದಕ ಕಿರಣ್ ಸಿರ್‍ಸಾಟ್ ಮಾತನಾಡಿ “ವ್ಯಕ್ತಿಗೆ ಸಾಮಜಿಕ ಜೀವನ ಇರಬೇಕೆ ಹೊರತು ಸಾಮಾಜಿಕ ಜಾಲತಾಣದ ಜೀವನ ಇರಬಾರದು. ಮಾಲಿಕನಾಗಬೇಕಾದರೆ ಮೊದಲು ಶ್ರಮಿಕನಾಗಿ ದುಡಿಯಲು ಕಲಿಯಬೇಕು” ಎಂದರು. ಪ್ರಾಂಶುಪಾಲ ನಾಗೇಶ್ ಎಮ್.ಭಟ್ ಮಾತನಾಡಿ,” ಮುಂಬರುವ ದಿನಗಳಲ್ಲಿ ವಿದೇಶೀ ವಿಶ್ವವಿಧ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಕಳಿಸುವ ಗುರಿ ಹೊಂದಲಾಗಿದೆ” ಭಟ್ಕಳ ಎದುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ್ ವಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಿಸಿಎ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ,ಸಂಯೋಜಕ ವಿಶ್ವನಾಥ್ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಫಣಿಯಪ್ಪಯ್ಯ ಹೆಬ್ಬಾರ್ ಸ್ವಾಗತಿಸಿದು, ದೇವೇಂದ್ರ ಕಿಣಿ ವಂದಿಸಿದರು. ವಿದ್ಯಾರ್ಥಿಗಳಾದ ಸ್ವಲೇಹ ಮತ್ತು ಜಹೀಮ್ ನಿರೂಪಿಸಿದರು.