ಕುಮಟಾ: ತಾಲೂಕಿನ ಹೊಲನಗದ್ದೆಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಪ್ರವಾಹದಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ಮೂರು ಮನೆಗಳ 22 ಜನರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೊಲನಗದ್ದೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಕಳೆದ ಮೂರು ದಿನಗಳಿಂದ ಗಂಜಿ ಕೇಂದ್ರ ತೆರೆಯಲಾಗಿದ್ದು ಪ್ರವಾಹ ಪೀಡಿತ ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.
ಪ್ರಭಾರಿ ಮುಖ್ಯಾಧ್ಯಾಪಕರಾದ ರವೀಂದ್ರ ಭಟ್ಟ ಸೂರಿ ಹಾಗೂ ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ವಾಸುದೇವ ಎಮ್ ನಾಯ್ಕ ರವರ ಉಸ್ತುವಾರಿಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗಳಾದ ಪುಷ್ಪಾ ಪಟಗಾರ, ಮೀನಾಕ್ಷಿ ಪಟಗಾರ, ಪಾರ್ವತಿ ನಾಯ್ಕ ರವರ ಸಹಕಾರದಿಂದ ಈ ಗಂಜಿ ಕೇಂದ್ರ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು ಅಕ್ಷರ ದಾಸೋಹ ಅಧಿಕಾರಿಗಳು, ಉತ್ತರಕನ್ನಡ ಜಿಲ್ಲಾಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರತ್ನಾಕರ ನಾಯ್ಕ , ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾರತಿ ಗುಡೇಅಂಗಡಿ, ಸದಸ್ಯರಾದ ಈಶ್ವರ ಪಟಗಾರ, ಶಾರದಾ ಪಟಗಾರ ಭೇಟಿ ನೀಡಿ ಪ್ರವಾಹ ಪೀಡಿತರಿಂದ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.