ಯಲ್ಲಾಪುರಕ್ಕೆ ನಾಲ್ಕು ಕಡೆಗಳಿಂದ ಮಾರ್ಗಗಳಿದ್ವು. ಹುಬ್ಬಳ್ಳಿ, ಮುಂಡಗೋಡ, ಸಿರಸಿ ಮತ್ತೆ ಅಂಕೋಲಾ.

ಮೊನ್ನೆ ಯಲ್ಲಾಪುರ ಅಂಕೋಲಾ ಮಧ್ಯ ಬರೋ ಅರಬೈಲ್ ಘಾಟ್ ಅಲ್ಲಿ ರಸ್ತೆ ಸಮೇತ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ನಿನ್ನೆ ರಾತ್ರಿ ಮಳೆಗೆ ಯಲ್ಲಾಪುರ ಸಿರಸಿ ಮಾರ್ಗದ ಬೇಡ್ತಿ ಸೇತುವೆಯ ಮೇಲೆ ನೀರು ಹರಿದು ವಾಹನ ಸಂಚಾರ ನಿಲ್ಲಿಸಲಾಗಿದೆ.

ಕೊನೆಯದಾಗಿ ಯಲ್ಲಾಪುರಕ್ಕೆ ಸಂಪರ್ಕ ಕೊಂಡಿಯಾಗಿ ಮುಂಡಗೋಡ ಮಾರ್ಗವಿತ್ತು. ಅದೂ ಕೂಡ ಶಿಡ್ಲಗುಂಡಿ ಸೇತುವೆ ಕೊಚ್ಚಿ ಹೋಗಿರುವ ಕಾರಣ ಸಂಚಾರವಿಲ್ಲ.

RELATED ARTICLES  ಬೈಕ್ ಹಾಗೂ ಬಸ್ ಅಪಘಾತ ಸ್ಥಳದಲ್ಲೇ ಸಾವಿಗೀಡಾದ ಬೈಕ್ ಸವಾವರು.

ಒಂದು ಆಸೆ ಇತ್ತು ಮನೆಗೋಗೋದಕ್ಕೆ. ಹೆಂಗಂತಿರಾ?
ಮಂಗಳೂರು ಟು ಹುಬ್ಬಳ್ಳಿ ವಿಮಾನಯಾನ. ಬೆಂಗಳೂರಿಗರು NH4 ಅಲ್ಲಿ ಹುಬ್ಬಳ್ಳಿ ಬಂದು ಯಲ್ಲಾಪುರ ಸೇರ್ಬಹುದಿತ್ತು. ಈ ಹೊತ್ತಿನವರೆಗೆ ದಿ ಸೇಫೇಸ್ಟ್ ರೂಟ್ ಆಗಿತ್ತು.

ಇತ್ತೀಚಿನ ವರದಿ, ಯಲ್ಲಾಪುರ ಹುಬ್ಬಳ್ಳಿ ಮಾರ್ಗದ ಕೋಳಿಕೆರೆ ಬಳಿ ರೋಡ್ ಬ್ಲಾಕ್ ಆಗಿದೆ. ಆದರೆ ಕುಸಿತದ ಭೀತಿ ಇಲ್ಲದ ರಸ್ತೆ. ಬ್ಲಾಕ್ ಕ್ಲೀಯರ್ ಆದ್ರೂ ಓಡಾಟ ದುಸ್ತರ.

RELATED ARTICLES  ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ದಿನಕರ ದಿನಕರ ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಅಮೋಘ ಸಾಧನೆ!

ಯಲ್ಲಾಪುರಕ್ಕೆ ಯಾವುದೆ ಮಾರ್ಗವಿಲ್ಲ. ಕಾರವಾರ – ಯಲ್ಲಾಪುರ, ಸಿರಸಿ – ಯಲ್ಲಾಪುರ, ಮುಂಡಗೋಡ – ಯಲ್ಲಾಪುರ ರಸ್ತೆಯ ಜೊತೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಯಲ್ಲಾಪುರ – ಹುಬ್ಬಳ್ಳಿ ಮಾರ್ಗವೂ ಬಂದ್ ಆಗುವುದರೊಂದಿಗೆ
“ಈಗ ಯಲ್ಲಾಪುರ ತಾಲೂಕು ದ್ವೀಪವಾಗಿ ಬಿಟ್ಟಿದೆ”.