ಕಾರವಾರ: ತಾಲೂಕಿನ ಉಳವಿ ಹಾಗು ಹನಕೋಣ ಗ್ರಾಮದಲ್ಲಿ ತೆರೆಯಲಾಗಿದ್ದ ಸೇವಾಕೇಂದ್ರಗಳಿಗೆ ಶುಕ್ರವಾರ ಸಂಸದ ಅನಂತಕುಮಾರ ಹೆಗಡೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.

ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಕದ್ರಾ ಹಾಗು ಮಲ್ಲಾಪುರ ಭಾಗದ ತೀವ್ರ ಮಳೆಯಿಂದ ಜನರು ತೊಂದರೆಗಳಿಗೆ ಎದುರಾಗಿದ್ದು, ನೆರೆ ಸಂತೃಸ್ತರನ್ನು ಹತ್ತಿರದ ಸೇವಾಕೇಂದ್ರಗಳಿಗೆ ಕಳುಹಿಸಲಾಗಿದೆ. ಅಲ್ಲಿನ ಸೇವಾಕೇಂದ್ರಕ್ಕೆ ಭೇಟಿ ನೀಡಿದ ಹೆಗಡೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಹಾಗೂ ದುರಂತಗಳಿಗೆ ಅವಕಾಶ ನೀಡದೆ ಸಮರ್ಪಕ ಮುಂಜಾಗೃತ ವ್ಯವಸ್ಥೆಗಳಿಗೆ ಅಧಿಕಾರಿಗಳು ತಯಾರಿರುವಂತೆ ಸೂಚಿಸಿದರು.

RELATED ARTICLES  ರಾಮತೀರ್ಥ ಉಳಿಸಿ ಸಮಾಲೋಚನಾ ಸಭೆ : ಹಲವು ವಿಚಾರ ಚರ್ಚೆ.

ಪ್ರವಾಹಕ್ಕೆ ಸಿಲುಕಿರುವವರ ರಕ್ಷಣೆ ಹಾಗು ಅವರನ್ನು ಸ್ಥಳಾಂತರಿಸಲು ಕೇಂದ್ರ ಸರಕಾರದ ಎನ್.ಡಿ.ಆರ್.ಎಫ್ ತಂಡದ ಮುಖ್ಯಸ್ಥರೊಂದಿಗೆ ಸಹ ಈ ಸಂದರ್ಭದಲ್ಲಿ ಚರ್ಚೆ ನಡೆಸಿದರು. ಈ ನಿಟ್ಟಿನಲ್ಲಿ ಎರಡು ಎನ್.ಡಿ.ಆರ್.ಎಫ್ ತಂಡದ ತುಕಡಿ ಜಿಲ್ಲೆಗೆ ಆಗಮಿಸಲಿದ್ದು ಕಾರವಾರದ ಕಾಳಿ ನದಿಯ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಹಾಗೂ ಗಂಗಾವಳಿ ನದಿ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಒಂದೊಂದು ತಂಡವನ್ನು ಮೀಸಲಿಡಲಾಗಿದೆ.

RELATED ARTICLES  ಬೈಕ್ ಅಪಘಾತ : ಯುವಕ ಸಾವು.

ಹಾಗೆಯೇ ನೌಕಾದಳದ ಹೆಲಿಕಾಪ್ಟರ್‌ನ್ನು ಅಂಕೋಲಾ ತಾಲ್ಲೂಕಿನಾದ್ಯಂತ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಹಾಗೂ ಆಹಾರ ಪೂರೈಸಲು ಪ್ರತ್ಯೇಕ ಮೀಸಲು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ, ಕೇಂದ್ರ ಸರಕಾರದಿಂದ ಅನುಮತಿ ಕೂಡ ಪಡೆದು ಕೊಳ್ಳಲಾಗಿದೆ. ಶುಕ್ರವಾರ ಮಧ್ಯಾಹ್ನ 12:30 ರಿಂದ ಎನ್.ಡಿ.ಆರ್.ಎಫ್ ಹಾಗೂ ನೌಕಾದಳದ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ಆರಂಭಗೊಳಿಸಲಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಹಾಗು ಇತರ ಸಂಭಂದಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.