ರಾಜ್ಯದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಬೀಳುತ್ತಿರುವ ಧಾರಾಕಾರ ಮಳೆಯಿಂದ ಭೀಕರ ನೆರೆ ಹಾವಳಿ ಉಂಟಾಗಿದ್ದು ಜನರು ಮನೆ, ತೋಟ, ಸಾಕು ಪ್ರಾಣಿ, ಕೃಷಿ ಭೂಮಿ ಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಈ ಕುರಿತು ಶ್ರೀ ದೇವಾಲಯದ ಧರ್ಮದರ್ಶಿ ಮಂಡಳಿಯು
ಶ್ರೀ ಮಾರಿಕಾಂಬೆಯ ಸನ್ನಿಧಿಯಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬದವರ ರಕ್ಷಣೆ ಮತ್ತು ಮಳೆ ಕಡಿಮೆಯಾಗುವ ಬಗ್ಗೆ ಶ್ರೀ ಮಾರಿಕಾಂಬಾ ದೇವಿಯ ಸನ್ನಿದಿಯಲ್ಲಿ ಪ್ರಾರ್ಥಿಸಿಕೊಂಡು ವಿಶೇಷ ಪೂಜೆ ನೆರವೇರಿಸಲಾಯಿತು.

RELATED ARTICLES  ಬಡ ಜನರ ಮನೆ ಸೇರಿತು ಗ್ಯಾಸ್ ಕಿಟ್ : ಸಂತೇಗುಳಿಯಲ್ಲಿ ನಡೆಯಿತು ಕಾರ್ಯಕ್ರಮ

ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಡಾ. ವೆಂಕಟೇಶ ಎಲ್.ನಾಯ್ಕ ಉಪಾಧ್ಯಕ್ಷರಾದ ಶ್ರೀ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಶ್ರೀ ಲಕ್ಷ್ಮಣ.ಎಮ್. ಕಾನಡೆ , ಶ್ರೀಮತಿ ಶಶಿಕಲಾ ಜಿ. ಚಂದ್ರಾಪಟ್ಟಣ ಮತ್ತು ಶಾಂತಾರಾಮ.ಎನ್. ಹೆಗಡೆ ಭಂಡೀಮನೆ ಅವರು ಉಪಸ್ಥಿತರಿದ್ದರು.

RELATED ARTICLES  ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸುವ ಕಲೆ ಯಕ್ಷಗಾನ-ಸಂತೋಷ ಗೂರೂಜಿ