ಕುಮಟಾ :ಉತ್ತರ ಕನ್ನಡ ಜಿಲ್ಲೆ ಪ್ರವಾಹ ಪೀಡಿತವಾಗಿದೆ. ಅದೂ ಅಲ್ಲದೇ ಹಳ್ಳಿಗಳಿಗೆ ಸಂಪರ್ಕಿಸಲು ಅಥವಾ ಹಳ್ಳಿಗರು ಸಂಪರ್ಕ ಮಾಡಿ ತಮ್ಮ ಕಷ್ಟ ಹೇಳಲು ದೂರವಾಣಿ ಸಹ ಸರಿ ಇರದೇ, ಸಂಪೂರ್ಣ ಹದಗೆಟ್ಟಿದೆ.
ಕರೆಂಟ್ ಇಲ್ಲದೇ ಹಲವು ಟಾವರ್ ಗಳು ಸ್ಥಬ್ದವಾಗಿದೆ. ಜನರೇಟರ್ ಮುಖಾಂತರ ಕಾರ್ಯ ನಿರ್ವಹಿಸಬೇಕಿದ್ದ ಟಾವರ್ ಗಳು ಡೀಸೆಲ್ ಕೊರತೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲ ಸಮಸ್ಯೆಯಿಂದಾಗಿ ಜಿಲ್ಲೆಯ ಜನ ಬಿ.ಎಸ್.ಎನ್.ಎಲ್. ಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇದನ್ನು ಪರಿಗಣಿಸಿದ ಸಂಸದರಾದ ಅನಂತಕುಮಾರ ಹೆಗಡೆಯವರು ಬಿ.ಎಸ್.ಎನ್.ಎಲ್. ನ ಸಿ.ಜಿ.ಎಂ. (Circle General Manager) ಅವರಿಗೆ ಖಡಕ್ ಸಂದೇಶ ನೀಡಿದ್ದು , ತಕ್ಷಣ ಜಿಲ್ಲೆಯ ಎಲ್ಲ ಟಾವರ್ ಗಳೂ ಯಾವುದೇ ಕಾರಣಕ್ಕೆ ಸ್ಥಗಿತಗೊಳ್ಳದೇ ಸಂಪೂರ್ಣ ಕಾರ್ಯ ನಿರ್ವಹಿಸಬೇಕು ಎಂದು ಆದೇಶಿಸಿದ್ದಾರೆ.
ಬಿ.ಎಸ್.ಎನ್.ಎಲ್. ನಿಂದ ಬಿ.ಎಸ್.ಎನ್.ಎಲ್. ಗೆ ಸಂಪೂರ್ಣ ಉಚಿತ ಕರೆ ಮಾಡಬಹುದಾಗಿದೆ.
ಬಿ.ಎಸ್.ಎನ್.ಎಲ್. ನಿಂದ ಇತರೆ ನೆಟ್ವರ್ಕಗೆ 20 ನಿಮಿಷಗಳ ಉಚಿತ ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದರು.
ಇಂದಿನಿಂದ ಉಚಿತ ಕರೆ ಸೌಲಭ್ಯ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಲಭ್ಯವಿದ್ದು, ಮುಂದಿನ ಒಂದು ವಾರ ಮುಂದುವರೆಯಲಿದೆ.