ಶಿರಸಿ :- ಉತ್ತರ ಕನ್ನಡದ ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿಯ ಬಾಳೆಹದ್ದ ಕ್ರಾಸ್ ಬಳಿ ಪಿಕಪ್ ವಾಹನ ಮತ್ತು ಕಾರ್ ನಡುವೆ ನಡೆದ ಭೀಕರ ಅಪಘಾತದಲ್ಲಿ
ಸ್ಥಳದಲ್ಲೇ ಮೂವರ ಸಾವನ್ನಪ್ಪಿರುವ ಹೃದಯವಿದ್ರಾವಕ ದುರ್ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮುಖಂಡ ರವಿಕುಮಾರ್, ಮಾಬಲೇಶ್ವರ ಮತ್ತು ಶಾರದಾ ಬೈರುಂಬೆ ಸೂರಿಮನೆ ಮೃತ ದುರ್ದೈವಿಗಳು.

RELATED ARTICLES  ಕಸಾಪ ಜಾಗ ಅತಿಕ್ರಮಣ ಸರ್ವೆಗೆ ಆರ್.ವಿ.ಡಿ ಸೂಚನೆ ; ವೇಣುಗೋಪಾಲ ಮದ್ಗುಣಿ

ಮಾಧವ್ ಮತ್ತು ಶೇಖರ್ ಗೆ ಗಾಯಗಳಾಗಿದ್ದು ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಕಿರವತ್ತಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಹಾರ ನೀಡಿ ವಾಪಸ್ ತೆರಳುವಾಗ ದುರ್ಘಟನೆ ಸಂಭವಿಸಿದೆ ಎಂದು ಹೆಳಲಾಗಿದೆ.

RELATED ARTICLES  ಶ್ರೀ ನಂಜುಂಡ ಸ್ವಾಮಿಗಳಿಗೆ ಗೋಕರ್ಣ ಗೌರವ.

ಸಂಸದ ಅನಂತಕುಮಾರ ಹೆಗಡೆ ಅವರ ಆ ವಾಹನದ ಹಿಂದೆ ಇದ್ದರು ಎಂದು ವರದಿಯಾಗಿದ್ದು ಸಂಸದರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ಸ್ಥಳದಲ್ಲಿದ್ದು ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆಂದು ಹೇಳಲಾಗಿದೆ.