ಶಿರಸಿ : ಗಣೇಶ ಚತುರ್ಥಿ ಹಬ್ಬದ ಎದುರಿನಲ್ಲಿರುವುದರಿಂದ ಸಾಮಾನ್ಯವಾಗಿ ಮನೆಮನೆಗಳಲ್ಲಿ ನಡೆಯುವ ಚಕ್ಲಿ ಕಂಬಳದ ವಾತಾವರಣವನ್ನು ಟಿ.ಎಸ್.ಎಸ್.ನ ವ್ಯಾಪಾರಿ ಅಂಗಳದಲ್ಲಿ ಮೂಡಿಸಲು ಆಯೋಜಿಸಿದ್ದ “ಚಕ್ಲಿ ಕಂಬಳ” ವಿನೂತನ ಮೇಳವನ್ನು ಶಿರಸಿ ಎ.ಪಿ.ಎಮ್.ಸಿ. ಕಾರ್ಯದರ್ಶಿಯಾದ ಶ್ರೀಮತಿ ವಿಜಯಲಕ್ಷ್ಮೀ  ಇವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ, ಸಂಘದ ನಿರ್ದೇಶಕರುಗಳು, ಪ್ರಧಾನ ವ್ಯವಸ್ಥಾಪಕರು, ಕೈ ಚಕ್ಕುಲಿ ತಯಾರಕರು, ಸಂಘದ ಸದಸ್ಯರು, ಗ್ರಾಹಕರು ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ದಿ.21ಕ್ಕೆ ಕುಮಟಾದಲ್ಲಿಯೂ ಖಾಸಗಿ ಶಾಲಾ-ಕಾಲೇಜುಗಳು ಬಂದ್??

    ಈ ಕಾರ್ಯಕ್ರಮದಲ್ಲಿ ಕೈ ಚಕ್ಕುಲಿ ತಯಾರಿಕೆಯಲ್ಲಿ 10 ವರ್ಷದ ಬಾಲಕನಿಂದ ಹಿಡಿದು ವಯೋವೃದ್ಧರು ಸೇರಿ ಪ್ರಾವೀಣ್ಯತೆ ಹೊಂದಿದ 150ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಬೆಳಿಗ್ಗೆ ಸಂಘದ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಮಟ್ಟಿನ ಚಕ್ಕುಲಿ ತಯಾರಿಕೆಗೆ ಸಹಾಯ ಮಾಡಿದರು.  ಚಕ್ಕುಲಿಯ ಜೊತೆಗೆ ಸಾಂಪ್ರದಾಯಕವಾದ ಬೆಣ್ಣೆ, ಕಾಯಿತುರಿ, ಬೆಲ್ಲ, ಹಾಗೂ ಪಲ್ಯವನ್ನು ನೀಡಲಾಯಿತು. ಚಹಾ ಮತ್ತು ಕಷಾಯ ಕೂಡ ಸವಿಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.
                              

RELATED ARTICLES  ಹೊನ್ನಾವರದಲ್ಲಿ ವಿಕಲ ಚೇತನ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ.