ಕುಮಟಾ: ತಾಲೂಕಿನಲ್ಲಿ ಕಪ್ಪು ಚಿರತೆಯೊಂದು ಕಾಣಿಸಿಕೊಂಡ ಪರಿಣಾಮ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂಬ ವರದಿ ಲಭಿಸಿದೆ.

ಇಲ್ಲಿನ ಹೊಸ ಹೆರವಟ್ಟಾದ ದೈವಜ್ಞ ಲಕ್ಷ್ಮೀನಾರಾಯಣ ಮಠಕ್ಕೆ ಹೋಗುವ ದಾರಿಯಲ್ಲಿ ಈ ಚಿರತೆ ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸಿದೆ.

RELATED ARTICLES  10th ಪಾಸ್ ಅದ ಮತ್ತು ಸ್ವಲ್ಪ ಕಂಪ್ಯೂಟರ್ ಜ್ಞಾನವುಳ್ಳ ಯಾವುದೇ ವ್ಯಕ್ತಿ ತಿಂಗಳಿಗೆ ಗಳಿಸಬಹುದು 30 ಸಾವಿರ..!! ಅದು ಹೇಗೆ ಗೊತ್ತಾ

ಕುಮಟಾದ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಗೊಲ್ಲಾರ್ ಅವರು ಕರ್ತವ್ಯಕ್ಕೆ ತೆರಳುವಾಗ ಹೊಸ ಹೆರವಟ್ಟಾ ದೈವಜ್ಞ ಲಕ್ಷ್ಮೀನಾರಾಯಣ ಮಠಕ್ಕೆ ಹೋಗುವ ರಸ್ತೆಯಲ್ಲಿ ಚಿರತೆ ಸಾಗುತ್ತಿರುವುದನ್ನು ನೋಡಿ ಭಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES  ಇಂದು ಬಾಡ ಕಾಂಚಿಕಾಂಬ ದೇವಸ್ಥಾನ ಸಪ್ತಯಕ್ಷೋತ್ಸವದ ಸಮಾರೋಪ : ಯಕ್ಷಪ್ರೇಮಿಗಳ ಕುತೂಹಲ ಹೆಚ್ಚಿಸಿದ ಚಿದಾನಂದ ಹಾಗೂ ಜಗನ್ನಾಥ ರ ಜೋಡಿ ಮಹಿಷಾಸುರ

ಘಟನೆ ನಂತರ ಅವರು ತಕ್ಷಣ ಮರಳಿ ಮನೆಗೆ ತೆರಳಿದ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆಗಾಗಿ ಹುಡುಕಾಟ ನಡೆಸಿದರೂ ಚಿರತೆಯ ಕುರುಹುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.