ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಒಳ ಹರಿವು ಭಾರೀ ಪ್ರಮಾಣದಲ್ಲಿ ಬರುತ್ತಿದೆ.
ಜಲಾಶಯದ ನೀರಿನ ಮಟ್ಟವು ದಿನಾಂಕ 13-8-2019 ರಂದು ಬೆಳಿಗ್ಗೆ 8 ಘಂಟಗೆ 1812.10 ಅಡಿಗಳನ್ನು ತಲುಪಿದ್ದು, ಒಳ ಹರಿವು ಸುಮಾರು 30646.00 ಕ್ಯೂಸೆಕ್ಸ ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ನೀರಿನ ಹರಿವು ಇದೇ ರೀತಿಯಲ್ಲಿ ಮುಂದುವರೆದಲ್ಲಿ ಜಲಾಶಯದ ಗರಿಷ್ಠ ಮಟ್ಟ ತಲುಪಲಿದೆ.
ಜಲಾಶಯದ ಸುರಕ್ಷಾ ಕಾರಣಗಳಿಗಾಗಿ ಜಾಲಶಯದಿಂದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು.
ಈ ಕಾರಣಕ್ಕೆ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿ ಪಾತ್ರದುದ್ದಕ್ಕೂ ವಾಸಿಸುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಈ ಮೂಲಕ ತಿಳಿಸಲಾಗುತ್ತದೆ.