ಕುಮಟಾ : ಭಾರಿ ಮಳೆಯಿಂದಾಗಿ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯ ನೆರೆ ಸಂತ್ರಸ್ಥರಿಗೆ ನೆರವು ನೀಡುವಂತೆ ಸಿಂಚನ ಟಿವಿ,ಹಾಗೂ ಯುಕೆ ಎಕ್ಸ್‌ಪ್ರೆಸ್‌ ಸಹಭಾಗಿತ್ವದಲ್ಲಿ ಜಿಲ್ಲೆಯ ಜನರಲ್ಲಿಯೇ ಮನವಿ ಮಾಡಿಕೊಂಡಿತ್ತು.ನಮ್ಮ ಕರೆಗೆ ಸ್ಪಂದಿಸಿದ ಅನೇಕರು ತಮ್ಮ ತಮ್ಮ ಊರುಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ನೀಡುತ್ತಿದ್ದಾರೆ.

ಇದೇ ರೀತಿ ನಮ್ಮ ಜಿಲ್ಲೆಯ ಶಿರಸಿ ತಾಲೂಕಿನ ಶಿರಸಿ ಗೆಳೆಯರ ಬಳಗ ಸಹಾಯ ನೀಡುವಲ್ಲಿ ಒಂದು ಹೆಜ್ಜೆ ಮುಂದೆ ಎಂದರೆ ತಪ್ಪಾಗಲಾರದು.ಇಲ್ಲಿ ಇವರು ಜಾತಿ,ಮತ ಧರ್ಮ ಮರೆತು ಎಲ್ಲರೂ ನಮ್ಮವರೆಂಬ ತುಂಬು ಮನಸ್ಸಿನಿಂದ ನೆರವು ನಿಡುತ್ತಿರುವುದು ಎಲ್ಲರೂ ಮೆಚ್ಚಲೇಬೇಕಾದ ಕಾರ್ಯ.ಇಲ್ಲಿನ ಮುಸ್ಲಿಂ ಸಮುದಾಯದವರೂ ಕೂಡ ಹಿಂದೂಗಳ ಜೊತೆಗೂಡಿ ನಾವೆಲ್ಲ ಒಂದೇ ಎಂಬಂತೆ ಸಂತ್ರಸ್ಥರಿಗೆ ನೆರವಾಗಿದ್ದಾರೆ. ಶಿರಸಿ ಪಟ್ಟಣದಾದ್ಯಂತ ಇವರ ತಂಡ ನೆರೆ ಸಂತ್ರಸ್ತರಿಗೆ ನೆರವು ನೀಡುವಂತೆ ಕೇಳಿಕೊಂಡಾಗ ಅಲ್ಲಿಯ ಜನರ ಪ್ರತಿಕ್ರಿಯೆ ಕಂಡು ಸ್ವತಃ ಗೆಳೆಯರ ಬಳಗವೆ ಆಶ್ಚರ್ಯಪಟ್ಟಿತ್ತು.

RELATED ARTICLES  ಆರೋಗ್ಯ & ಹದಿಹರೆಯ ವಯೋಮಾನದ ಮಕ್ಕಳು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ

ಯಾಕೆಂದರೆ ಇವರ ಒಂದು ಮಾತಿಗೆ ಇಡೀ ಮಾರುಕಟ್ಟೆಯಲ್ಲಿರುವ ಮಾರಾಟಗಾರರು ತಾವು ಮಾರಲೆಂದು ತಂದಿರುವ ತರಕಾರಿ,ಹಣ್ಣು,ಬೇಳೆಕಾಳು,ಬಿಸ್ಕೆಟ್,ಬನ್,ಚಾಪೆ,ಬೆಡ್ ಶೀಟ್,ಔಷದಿ,ಅಕ್ಕಿ ಸೇರಿದಂತೆ ಅನೇಕ ವಸ್ತುಗಳ ಚೀಲ ಹಾಗೂ ಬಾಕ್ಸ್ ಗಳನ್ನೇ ತಂದು ಇವರು ತಂದಿದ್ದ ವಾಹನಕ್ಕೆ ತುಂಬಲಾರಂಬಿಸಿದ್ದಾರೆ.ಕೊನೆಯಲ್ಲಿ ಸಾಮಾನುಗಳು ತುಂಬಿದ್ದು ಬರೊಬ್ಬರಿ ಎರಡು ಟಾಟಾ ಏಸ್ ವಾಹನದಲ್ಲಿ.ಇಸ್ಟೊಂದು ದೊಡ್ಡ ಪ್ರಮಾಣದಲ್ಲಿ ಸಹಕರಿಸಿದ ವಸ್ತುಗಳನ್ನು ತುಂಬಿಕೊಂಡು ಕುಮಟಾ ಮಿರ್ಜಾನಿನ ನಡುಗಡ್ಡೆ ಪ್ರದೇಶವಾದ ಐಗಳಕೂರ್ವೆಗೆ ದೋಣಿಯ ಮೇಲೆ ತೆರಳಿ ಅಲ್ಲಿನ ನೆರೆ ಸಂತ್ರಸ್ಥರ ಕಷ್ಟಗಳನ್ನು ಅರಿತು ಅವರಿಗೆ ನೀಡಿದ್ದಾರೆ‌.ನಂತರ ಗಂಗಾವಳಿ, ಅಂಕೋಲಾ ತಾಲೂಕಿನ ಕುದ್ರಿಗಿ,ಕಾರವಾರದ ಸಿದ್ದರ, ಕಿನ್ನರ,ಗ್ರಾಮಕ್ಕೆ ತೆರಳಿ ಸಂತ್ರಸ್ಥರನ್ನು ಭೇಟಿ ಮಾಡಿ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

RELATED ARTICLES  ಭಟ್ಕಳದಲ್ಲಿ ಮತ್ತೆ ಏಳು ಜನರಿಗೆ ಪಾಸಿಟೀವ್ : ಮುಂದುವರಿದ ಕರೋನಾ ರಣಕೇಕೆ..!

ಈ ಸಂದರ್ಭದಲ್ಲಿ ಶಿರಸಿ ಗೆಳೆಯರ ಬಳಗದ ರಾಘವೇಂದ್ರ, ಸಂತೋಷ, ಲೋಕೇಶ್, ನಾಗರಾಜ,ಪ್ರಸನ್ನ, ಕೃಷ್ಣ,ರಾಜೇಶ,ಪವನ
ಯುಕೆ ಎಕ್ಸ್‌ಪ್ರೆಸ್‌ ಹಾಗೂ ಸಿಂಚನ ಟಿವಿಯ ಮಂಜು ದೀವಗಿ,ಶಿವಾನಂದ ಪಟಗಾರ,ಗಜೇಂದ್ರ ಪಟಗಾರ, ಜೊತೆಗೆ ಐಗಳಕೂರ್ವೆ ಗ್ರಾಮಸ್ಥರಾದ ಸುಬ್ರಾಯ್ ಪಟಗಾರ ಹಾಜರಿದ್ದರು.