ಹೊನ್ನಾವರ : ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಸಂದರ್ಭದಲ್ಲಿ ಚಿನ್ನದ ವಿಶ್ವಕಪ್ ಟ್ರೋಫಿಯನ್ನು ತಯಾರಿಸಿ ಎಲ್ಲರ ಗಮನವನ್ನು ಸೆಳೆದು ಪ್ರಸಿದ್ಧರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಸನ್ನ ಚಂದ್ರಕಾಂತ ಶೇಟ್ ಇವರು ನಮ್ಮ ದೇಶದ ಅಭಿಮಾನದಿಂದ, ನಮ್ಮ ಹೆಮ್ಮೆಯ ಪ್ರಧಾನಿಗಳಾದ ಮೋದಿಜಿಯವರು ಸೈನಿಕರಿಗೆ ನೀಡುತ್ತಿರುವ ಗೌರವವನ್ನು ಆದರಿಸಿ, ದೇಶಕ್ಕಾಗಿ ನಿರಂತರ ಸೇವೆ ಸಲ್ಲಿಸಿ, ದೇಶಕ್ಕಾಗಿ ಹೋರಾಡಿ ಹುತಾತ್ಮರಾದಂತ ಯೋಧರ ಸ್ಮರಣಾರ್ಥವಾಗಿರುವ ‘ಅಮರ ಜವಾನ’ ಜ್ಯೋತಿಯ ಸ್ಮಾರಕದ ತದ್ರೂಪವನ್ನು ಮತ್ತು ನಮ್ಮ ರಾಷ್ಟ್ರಧ್ವಜವನ್ನು ಚಿನ್ನದಲ್ಲಿ ತಯಾರಿಸಿ ಮತ್ತೊಂದು ಸಾಧನೆಗೈದಿದ್ದಾರೆ.

RELATED ARTICLES  ಜಿಲ್ಲೆಗೆ ಐದನೇ ಸ್ಥಾನ, ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸರಸ್ವತಿ ಪಿ.ಯು ಕಾಲೇಜಿನ ಹೇಮಾ ನಾಯಕ

ಈತನು ಹೊನ್ನಾವರದ ಎಸ್. ಡಿ. ಎಮ್ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾಗಿದ್ದು, ಹೊನ್ನಾವರದ ಮಾರುತಿ ಪ್ರಸನ್ನ ಜ್ಯೂವೆಲ್ಲರಿಯ ಮಾಲೀಕರಾದ ಚಂದ್ರಕಾಂತ ಶೇಟ್ ಮತ್ತು ಶೋಭಾ ದಂಪತಿಗಳ ಪುತ್ರ. ಬಿಡುವಿನ ವೇಳೆಯಲ್ಲಿ ತಮ್ಮ ಕುಲ ಕಸುಬಾದ ಚಿನ್ನ ಬೆಳ್ಳಿ ಕೆಲಸವನ್ನು ಮಾಡುತ್ತ ದೈವಜ್ಞ ಬ್ರಾಹ್ಮಣ ಸಮಾಜದ ಕಣ್ಮಣಿಯಾಗಿದ್ದಾನೆ.

RELATED ARTICLES  ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

ಅಗಷ್ಟ 5ರಂದು ಆರ್ಟಿಕಲ್ 370 ನ್ನುರದ್ದುಗೊಳಿಸಿ ಭಾರತ ಮಾತೆಗೆ ಕಾಶ್ಮೀರ ಕಿರೀಟವನ್ನು ತೊಡಿಸಿ ನವ ಭಾರತ ಸಾಮ್ರಾಜ್ಯದ ಪಟ್ಟಾಭಿಷೇಕ ಮಾಡಿದ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಿಗೆ ಹುತಾತ್ಮರ ಸ್ಮರಣಾರ್ಥವಾಗಿ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಂದು ಇದನ್ನು ಸಮಪಿ೯ಸಬೇಕುಂದು ಮಹದಾಸೆಯನ್ನು ಹೊಂದಿರುತ್ತಾನೆ.

ಅಮರ್ ಜವಾನ ತದ್ರೂಪ ತಯಾರಿಸಲು ತಗುಲಿದ ಚಿನ್ನ 53 ಮಿಲಿ. ಗ್ರಾಂ ಹಾಗೂ ರಾಷ್ಟ್ರಧ್ವಜಕ್ಕೆ 8 ಮಿಲಿ.ಗ್ರಾಂ ಚಿನ್ನವನ್ನು ಬಳಸಲಾಗಿದೆ.