ಶಿರಸಿ: ಮಾಜಿ ಶಾಸಕ ಉಮೇಶ ಭಟ್ಟ ಅವರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ  ಹೃದಯಾಘಾತದಿಂದ ನಿಧನ  ಹೊಂದಿದರು. ಸ್ಪೀಕರ್ ಕಾಗೇರಿಯವರು ಇವರ ಅಂತಿಮ ದರ್ಶನ ಪಡೆದರು.

 ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಭಾವಿಕೇರಿ ಗ್ರಾಮದವರಾದ ಉಮೇಶ ಭಟ್ಟರು ಅನೇಕ ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿದ್ದರು.ಮೂರು ದಶಕಗಳ ಹಿಂದೆ 1990 ರಲ್ಲಿ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅವರು  ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದರು.

ಮತ್ತೊಂದು ಅವಧಿಗೆ ವಿಧಾನಸಭಾ ಚುನಾವಣೆಗೆ ಅವರು ಸ್ಪರ್ಧೆ ಮಾಡಿದ್ದರೂ ಕೂಡ ಜಯ    ಅವರಿಗೆ ದಕ್ಕಿರಲಿಲ್ಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ನಾಲ್ಕು ದಶಕಗಳಿಂದ ಕಟ್ಟಾ ಕಾಂಗ್ರೆಸಿಗರಾಗಿದ್ದರು.ಹುಬ್ಬಳ್ಳಿಯ ಲೋಕಶಿಕ್ಷಣ ಟ್ರಸ್ಟಿನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದ ಉಮೇಶ ಭಟ್ಟ ಅವರು ಶಿರಸಿಯ ಜನಶಕ್ತಿ ವಿಶ್ವಸ್ಥ ಮಂಡಳಿಯ ಗೌರವಾಧ್ಯಕ್ಷರಾಗಿ ಸ್ಥಳೀಯ ಪತ್ರಿಕೆಯೊಂದನ್ನು ಮುನ್ನಡೆಸುತ್ತಿದ್ದರು.ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಸ್ವಂತ ಮನೆಯನ್ನು ಹೊಂದಿದ್ದ ಉಮೇಶ ಭಟ್ಟ ಅವರು   ಕಳೆದ ವಾರ ಅತಿವೃಷ್ಟಿಯಿಂದ ಉಂಟಾದ ನೆರೆಯಲ್ಲಿ ಈ ಮನೆಗೆ ನೀರು ನುಗ್ಗಿದ ಬಗ್ಗೆ ನೋವು ವ್ಯಕ್ತಪಡಿಸುತ್ತಿದ್ದರು.ಈಗ ನೆರೆ ನೀರು ಇಳಿದಿದ್ದು ಈ ಮನೆಯನ್ನು ಸ್ವಚ್ಛಗೊಳಿಸುವುದಕ್ಕೆ ಗುಳ್ಳಾಪುರಕ್ಕೆ ಬರಬೇಕು ಎಂಬುದಾಗಿ  ಮಂಗಳವಾರ ಅವರು ಶಿರಸಿ ಹಾಗೂ ಯಲ್ಲಾಪುರ ತಮ್ಮ ಆಪ್ತರಲ್ಲಿ ಹೇಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಮಾಜಿ ಶಾಸಕ , ಕೆಪಿಸಿಸಿ ಯ ಮಾಜಿ ಉಪಾಧ್ಯಕ್ಷ ಜಿಲ್ಲೆಯ ಹಿರಿಯ ಧುರೀಣರಾಗಿದ್ದ ಉಮೇಶ ಭಟ್ಟ ಅವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಯಲ್ಲಿ ನಿರಂತರ ಮಾರ್ಗದರ್ಶನ ನೀಡುತ್ತಿದ್ದರು.  ಪ್ರಭಾವಿ ನಾಯಕರಾಗಿದ್ದ, ಸದಾ ಚೈತನ್ಯದ ಚಿಲುಮೆಯಾಗಿದ್ದ ಹಸನ್ಮುಖಿ , ಅವರಾಗಿದ್ದರು. ಪಕ್ಷದ ಕಾರ್ಯಕರ್ತರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು.

RELATED ARTICLES  ಯಲ್ಲಾಪುರ: ಪ್ರಶಸ್ತಿ ಬಾಚಿಕೊಂಡ YTSS ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು