ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕವಲಕ್ಕಿಯಲ್ಲಿ ಅಗಸ್ಟ 15, 2019ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆ, ಅಬ್ಳಿಯವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿಗಳಾದ ಶ್ರೀ ಟಿ.ಜಿ. ಹೆಗಡೆ, ನೀಲ್ಕೋಡ್ ರವರು ಹಾಗೂ ಮುಖ್ಯಾಧ್ಯಾಪಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸರವರು ಉಪಸ್ಥಿತರಿದ್ದರು.

RELATED ARTICLES  ಜ್ಞಾನದ ಸಿರಿತನಕ್ಕೆ ಕೆಲಸ ಮಾಡಬೇಕು : ಮೋಹನ ಹೆಗಡೆ.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಂದ, ದೈಹಿಕ ಶಿಕ್ಷಕರಾದ ವಿನೋದ್ ಮೇಸ್ತರವರ ಮಾರ್ಗದರ್ಶನದಲ್ಲಿ ಶಿಸ್ತುಬದ್ಧವಾಗಿ ಕವಾಯತನ್ನು ಬೆಂಡ್ ವಾದ್ಯದ ಜೊತೆಗೆ ನಡೆಸಿರುವುದು ವಿಶೇಷ ಆಕರ್ಷಣೆಯಾಗಿದೆ.


ಅಧ್ಯಕ್ಷರಾದ ಶ್ರೀ ಉಮೇಶ ಹೆಗಡೆಯವರು ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತನಾಡಿದರು. ಅಲ್ಲದೇ ಇಂದು ರಕ್ಷಾ ಬಂಧನದ ದಿನವಾಗಿದ್ದು ನಮ್ಮ ನಿಮ್ಮಲ್ಲಿ ಭ್ರಾತೃತ್ವದ ಭಾವನೆ ಕೂಡ ಬೆಳೆಯಬೇಕೆಂದು ತಿಳಿಸಿದರು ಮತ್ತು ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಯಿತು.

RELATED ARTICLES  ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋದ ಹೊನ್ನಾವರ ಮೂಲದ ವ್ಯಕ್ತಿ

ಶಾಲೆಯ ವಿದ್ಯಾರ್ಥಿಗಳಾದ ಕುಮಾರ ನೀರಜ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಕೃತಾ ಎಸ್ ಭಟ್ ಸ್ವಾಗತಿಸಿದರು. ಕುಮಾರಿ ಅನುಷಾ ಶಾನಭಾಗ ವಂದಿಸಿದರು.