ಕುಮಟಾ : 73ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಕುಮಟಾ ಪೋಲೀಸ್ ಇಲಾಖೆ ಅರ್ಥಪೂರ್ಣವಾಗಿ ಆಚರಿಸಿದೆ.

ಈ ಸಲ ನಮ್ಮ ತಾಲೂಕು ನೆರೆ ಹಾವಳಿಯಿಂದ ಕಂಗೆಟ್ಟಿರೊದು ಎಲ್ಲರಿಗೂ ಗೊತ್ತಿರೋ ವಿಚಾರ.ನಮ್ಮ ಈ ಕಷ್ಟದ ಸಂದರ್ಭದಲ್ಲಿ. ಇಲಾಖೆ ಹಗಲು ರಾತ್ರಿ ಎನ್ನದೇ ಶ್ರಮಿಸಿದೆ.

ನಿನ್ನೆಯ ದಿನ ನಮ್ಮಕುಮಟಾ ಜನತೆಯ ಅಚ್ಚುಮೆಚ್ಚಿನ ಅಧಿಕಾರಿಗಳಾದ ಸಿಪಿಐ ಸಂತೋಷ ಹಾಗೂ ಪಿಎಸ್ಐ ಸಂಪತ್ ಕುಮಾರ ತಮ್ಮ ಸಿಬ್ಬಂದಿಗಳ ಜೊತೆಗೂಡಿ ಕತಗಾಲಗೆ ತೆರಳಿ ತಮ್ಮ ಸ್ವಂತ ಹಣದಿಂದ ಕತಗಾಲದಲ್ಲಿ ನೆರೆಯಿಂದ ಪೂರ್ತಿ ನಷ್ಟ ಅನುಭವಿಸಿದ ಸುಮಿತ್ರಾ ಅಂಬಿಗ ಎನ್ನುವವರ ಮನೆಗೆ ಬೇಕಾದ ಪಾತ್ರೆ ಪಗಡೆ ದಿನಸಿ ಸ್ವಲ್ಪ ಹಣ ಹೀಗೆ ಸರಿ ಸುಮಾರು 30ಸಾವಿರಕ್ಕೂ ಹೆಚ್ಚಿನ ಸಹಾಯ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.

RELATED ARTICLES  ಸೂರಜ್ ನಾಯ್ಕ ಸೋನಿ ವಿರುದ್ಧ ಹೇಳಿಕೆಗೆ ಸೂರಜ್ ನಾಯ್ಕ ಅಭಿಮಾನಿ ಬಳಗದ ಖಂಡನೆ .

ಈ ಮೂಲಕ ದೇಶ ಪ್ರೇಮದ ಜೊತೆ ಜನರ ಬಗ್ಗೆ ತಮಗಿರೊ ಕಾಳಜಿಯನ್ನು ತೋರಿಸಿದ ನಮ್ಮ ಕುಮಟಾ ಪೊಲೀಸ್ ಇಲಾಖೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

RELATED ARTICLES  ಉತ್ತರ ಕೊಪ್ಪ ಗುಜಮಾವಿನಲ್ಲಿ ದೇವಾಲಯದ ಮೇಲೆ ಮರಬಿದ್ದು ಹಾನಿ.