ಕುಮಟಾ: ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವಾಸುದೇವ ಎಮ್ ನಾಯ್ಕ ಧ್ವಜಾರೋಹಣ ನೆರವೇರಿಸಿ ಹಲವರ ತ್ಯಾಗ ಬಲಿದಾನದಿಂದ ದೊರಕಿದ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ದೇಶದ ಅಭಿವೃದ್ದಿಯಲ್ಲಿ ನಮ್ಮದೇ ಆದ ಕೊಡುಗೆ ನೀಡಬೇಕಾಗಿದೆ ಎಂದರು. ಊರ ಹಿರಿಯ ನಾಗರಿಕರು, ಹೊಲನಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವೇಂದ್ರ ಪಟಗಾರ, ಸದಸ್ಯರಾದ ಈಶ್ವರ ಪಟಗಾರ, ರಮ್ಯಾ ಶೇಟ್, ರಾಮಾ ಮಡಿವಾಳ, ನಾಗೇಶ ನಾಯ್ಕ, ನಿಕಟಪೂರ್ವ ಅಧ್ಯಕ್ಷೆ ದೀಪಾ ಹಿಣಿ , ಶಿಕ್ಷಕರಾದ ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ ಶ್ಯಾಮಲಾ ಬಿ ಪಟಗಾರಅಂಗನವಾಡಿ ಕಾರ್ಯಕರ್ತೆಯರು,ಅಕ್ಷರದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಪ್ರಭಾರ ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

RELATED ARTICLES  ಚರ್ಚಾ ಸ್ಪರ್ಧೆಯಲ್ಲಿ ಎಸ್.ಡಿ.ಎಂ.ಮಹಾವಿದ್ಯಾಲಯದ ಕು. ಮೇಧಾ ಶಂಕರ ಭಟ್ಟ ತೃತೀಯ

ಸ್ವಾತಂತ್ರ್ಯೋತ್ಸವದ ವಿಶೇಷ ಸಮವಸ್ತ್ರದಲ್ಲಿ ಮಕ್ಕಳ ಶಿಸ್ತುಬದ್ಧ ನಡೆ, ವಾದ್ಯವೃಂದದೊಂದಿಗೆ ಬಣ್ಣ ಬಣ್ಣದ ಧ್ವಜ ಹಿಡಿದು ಮಾಡಿದ ಪ್ರಭಾತಪೇರಿ ವಿಶೇಷವಾಗಿ ಸಾರ್ವಜನಿಕರ ಗಮನ ಸೆಳೆದವು. ನಂತರ ಸಭಾ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.

RELATED ARTICLES  ಹೊನ್ನಾವರಕ್ಕೆ ಪ್ರಯೋಜನವಿಲ್ಲದ ನೀರಸ ಬಜೆಟ್ -ಜಗದೀಪ. ಎನ್. ತೆಂಗೇರಿ.