ಕುಮಟಾ: ತಾಲೂಕಿನ ದೀವಗಿ ಗ್ರಾಮದ ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ದಿನಬಳಕೆಯ ಸಾಮಗ್ರಿಗಳನ್ನು ಬುಧವಾರ ಶಾಸಕ ದಿನಕರ ಶೆಟ್ಟಿ ವಿತರಿಸಿ, ಸಂತ್ರಸ್ತರಿಗೆ ಏನೇ ಸಮಸ್ಯೆಯಾದರೂ ಶೀಘ್ರ ಸ್ಫಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಘನಾಶಿನಿ ನದಿಗೆ ಬಂದ ಪ್ರವಾಹದಿಂದ ತಾಲೂಕಿನ ಐಗಳಕುರ್ವೆ, ಹೆಗಡೆ, ದೀವಗಿ, ಅಳಕೋಡ, ತಂಡ್ರಕುಳಿ ಸೇರಿದಂತೆ ಬಹುತೇಕ ಗ್ರಾಮಗಳು ಜಲಾವೃತ್ತಗೊಂಡಿತ್ತು. ನೂರಾರು ಕುಟುಂಬಗಳು ಅತಂತ್ರರಾಗಿದ್ದರು. ಅದೇ ರೀತಿ ದೀವಗಿ ಗ್ರಾಮದಲ್ಲಿ 30ಕ್ಕೂ ಅಧಿಕ ಕುಟುಂಬಗಳು ಅತಂತ್ರರಾಗಿದ್ದರು. ಈ ನೆರೆ ಸಂತ್ರಸ್ತರಿಗೆ ಅನುಕೂಲವಾಗಲೆಂದು ತಾಲೂಕು ಆಡಳಿತವು ಅಕ್ಕಿ, ಸಕ್ಕರೆ, ಉಪ್ಪು, ಬೇಳೆಕಾಳು, ಎಣ್ಣೆ, ಸೀಮೆ ಎಣ್ಣೆ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ನೀಡಿದ್ದು, ಆ ಎಲ್ಲ ಸಾಮಗ್ರಿಗಳನ್ನು ಶಾಸಕ ದಿನಕರ ಶೆಟ್ಟಿ ಸಂತ್ರಸ್ತರಿಗೆ ವಿತರಿಸಿದರು.

RELATED ARTICLES  ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..!