ಕುಮಟಾ: ತಾಲೂಕಿನ ಹೆಗಡೆಯಲ್ಲಿ ಶ್ರೀ ಕಾನಮ್ಮ ಮಂದಿರದಲ್ಲಿ ಗುರುವಾರ ಶ್ರಾವಣ ನೂಲುಹುಣ್ಣಿಮೆ ಪ್ರಯುಕ್ತ ಉಪಾಕರ್ಮ, ಉಪವೀತ ಧಾರಣಾ ಕಾರ್ಯಕ್ರಮ ನಡೆಯಿತು.
ಸಾಹಿತಿ ಟಿ.ಜಿ.ಭಟ್ಟ ಹಾಸಣಗಿ ಮುಂದಾಳತ್ವದಲ್ಲಿ ವೇ. ಸು. ಗ. ಶರ್ಮಾ ಆಚಾರ್ಯತ್ವದಲ್ಲಿ ಉಪಾಕರ್ಮ ಹವನಾದಿ ಕೈಂಕರ್ಯಗಳು ಸಾಂಗವಾಗಿ ನೆರವೇರಿತು. ಸ್ಥಳೀಯ ಹವ್ಯಕ ಬಂಧುಗಳು ಹಾಜರಿದ್ದು ಪಂಚಗವ್ಯ ಪ್ರಾಶನ, ಉಪವೀತ(ನೂತನ ಜನಿವಾರ) ಧಾರಣೆ ಮಾಡಿದರು. ಕಾನಮ್ಮ ದೇವಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

RELATED ARTICLES  ‘ಸದಾಶಿವ ವರದಿ: ಸಾರ್ವಜನಿಕ ಚರ್ಚೆಗೆ ಒತ್ತಾಯ’