ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಸಾಪ ವತಿಯಿಂದ ತಾಲೂಕಿನ ತೆರ್ನಮಕ್ಕಿ ಹಾಗೂ ಬೈಲೂರಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ತೆರ್ನಮಕ್ಕಿಯ ಸರ್ಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ನಡೆಸಿದ ದೇಶಭಕ್ತಿ ಸ್ಪರ್ಧೆಯಲ್ಲಿ ವಸುಂಧರಾ ಹೊನ್ನಪ್ಪ ನಾಯ್ಕ ಹಾಗೂ ಅಶ್ವಿನಿ ವಿಷ್ಣು ನಾಯ್ಕ ಪ್ರಥಮ ಸ್ಥಾನ ಪಡೆದರೆ ಧನ್ಯ ಮೋಹನ ನಾಯ್ಕ ದ್ವಿತೀಯ ಸ್ಥಾನ, ಎಂ.ವಾಣಿಶ್ರೀ ತೃತೀಯ ಬಹುಮಾನ ಪಡೆದರು. ಸರ್ಕಾರಿ ಪ್ರೌಢಶಾಲೆ ತೆರ್ನಮಕ್ಕಿಯ ವಿದ್ಯಾರ್ಥಿಗಳಿಗೆ ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಮುಖ್ಯಾಧ್ಯಾಪಕ ಪ್ರಶಾಂತ ಪಟಗಾರ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಬಹುಮಾನ ವಿತರಿಸಿದರು.

RELATED ARTICLES  ವಿಜ್ಞಾನ ಮಾದರಿ ತಯಾರಿ ಶ್ರೀನಿಧಿ ರಾಜ್ಯಮಟ್ಟಕ್ಕೆ


ಬೈಲೂರಿನ ಸರ್ಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ನಡೆಸಿದ ದೇಶಭಕ್ತಿ ಸ್ಪರ್ಧೆಯಲ್ಲಿ ನಿಶಾ ಲಕ್ಷ್ಮಣ ಮೊಗೇರ ಪ್ರಥಮ ಸ್ಥಾನ ಪಡೆದರೆ ಸಹನಾ ವಿಷ್ಣು ನಾಯ್ಕ ದ್ವಿತೀಯ ಸ್ಥಾನ, ಛಾಯಾ ಜಿ.ಹರಿಕಂತ್ರ ತೃತೀಯ ಬಹುಮಾನ ಪಡೆದರು. ಬಹುಮಾನ ವಿಜೇತರಿಗೆ ಕಸಾಪ ಗೌರವ ಕಾರ್ಯದರ್ಶೀಗಳಾದ ಎಂ.ಪಿ.ಬಂಢಾರಿ, ಎಸ.ಡಿ.ಎಮ್.ಸಿ. ಅಧ್ಯಕ್ಷರಾದ ವೆಂಕಟ್ರಮಣ ಹರಿಕಾಂತ, ಶಾಲಾ ಮುಖ್ಯಾಧ್ಯಾಪಕಿ ಮಹಾದೇವಿ ಭಟ್ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಸ್ಪರ್ಧೇಯಲ್ಲಿ ವಿಜೇತರಾದ ಹಾಗು ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.

RELATED ARTICLES  ನಾಪತ್ತೆಯಾಗಿದ್ದ ಮಹಾಬಲೇಶ್ವರ ಗಣಪತಿ ಹೆಗಡೆ ಶವವಾಗಿ ಪತ್ತೆ