ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ಆಕ್ಷೇಪಿಸುತ್ತಿರುವ ವಿಪಕ್ಷಗಳಿಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ವೇದಿಕೆ ಬಳಸಿಕೊಂಡರು. ಕೆಂಪುಕೋಟೆಯಲ್ಲಿ ಇಂದು ತಮ್ಮ ಆರನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 370ನೇ ವಿಧಿ ರದ್ಧತಿಯ ವಿರೋಧಿಗಳ ಮೇಲೆ ಹರಿಹಾಯ್ದರು. ಅದರಲ್ಲೂ ಕಾಂಗ್ರೆಸ್ ಪಕ್ಷವನ್ನು ಅವರು ನೇರವಾಗಿ ತರಾಟೆಗೆ ತೆಗೆದುಕೊಂಡರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದು ಅಷ್ಟು ಮುಖ್ಯವಾಗಿದ್ದರೆ ಕಾಂಗ್ರೆಸ್ ಪಕ್ಷವು ತನ್ನ ಆಡಳಿತದ ಅವಧಿಯಲ್ಲಿ ಈ ಸ್ಥಾನಮಾನವನ್ನು ಯಾಕೆ ಖಾಯಂಗೊಳಿಸಲಿಲ್ಲ ಎಂದು ಮೋದಿ ನೇರವಾಗಿ ಪ್ರಶ್ನಿಸಿದರು.

“35ಎ ಮತ್ತು 370ನೇ ವಿಧಿಗಳನ್ನ ರದ್ದುಗೊಳಿಸಿದ್ದನ್ನ ಕೆಲ ರಾಜಕಾರಣಿಗಳು ವಿರೋಧಿಸುತ್ತಲೇ ಬಂದರು. ಇವರಿಗೆ ಇದು ಅಷ್ಟು ಮುಖ್ಯವಾಗಿದ್ದರೆ ಕಳೆದ 70 ವರ್ಷದಲ್ಲಿ ಯಾಕೆ ಅದನ್ನು ಖಾಯಂಗೊಳಿಸಲಿಲ್ಲ?” ಎಂದು ಕಾಂಗ್ರೆಸ್ ಪಕ್ಷವನ್ನು ಮೋದಿ ಟೀಕಿಸಿದರು.

RELATED ARTICLES  ಹಿರಿಯ ನಟ ಕಾಶೀನಾಥ ಇನ್ನಿಲ್ಲ: ನಗಿಸಿದವನ ನಗು ಇನ್ನು ನೆನಪು ಮಾತ್ರ

ತಮ್ಮ ಸರ್ಕಾರವು ಸಮಸ್ಯೆಗಳನ್ನ ಪೋಷಿಸುವುದೂ ಇಲ್ಲ, ಅವುಗಳು ಜೀವಂತವಿರಲೂ ಬಿಡುವುದಿಲ್ಲ. ಕಾಶ್ಮೀರದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗಿ ಒಂದು ದೇಶ ಒಂದು ಸಂವಿಧಾನ ಚಾಲನೆಗೆ ಬಂದಂತಾಗಿದೆ. ಹಿಂದಿನ ಸರ್ಕಾರಗಳು ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಮಾಡಿದ ಪ್ರಯತ್ನಗಳು ಫಲ ಕೊಡಲಿಲ್ಲ. ಹೊಸ ವಿಧಾನದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದು ಅಗತ್ಯವಾಗಿತ್ತು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡರು.

RELATED ARTICLES  ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಅಪಘಾತ

ಸಂವಿಧಾನದ 35ಎ ಮತ್ತು 370ನೇ ವಿಧಿಗಳು ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದವು. ರಕ್ಷಣೆ, ವಿದೇಶಾಂಗ ವ್ಯವಹಾರ ಇತ್ಯಾದಿ ಕೆಲವೇ ವಿಚಾರಗಳನ್ನ ಹೊರತುಪಡಿಸಿ ಉಳಿದಂತೆ ಕಾಶ್ಮೀರದ ಮೇಲೆ ಕೇಂದ್ರದ ಅಂಕೆ ಇರಲಿಲ್ಲ. ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನವಿತ್ತು. 10 ದಿನಗಳ ಹಿಂದೆ ಮೋದಿ ಸರ್ಕಾರವು ಸಂವಿಧಾನದಲ್ಲಿ ತಿದ್ದುಪಡಿ ತಂದು ಕಾಶ್ಮೀರದ ವಿಶೇಷಾಧಿಕಾರವನ್ನು ತೆಗೆದುಹಾಕಿತು. ಸರ್ಕಾರದ ಈ ಕ್ರಮ ಅಸಾಂವಿಧಾನಿಕ ಎಂದು ಹಲವು ವಿಪಕ್ಷಗಳು ಆರೋಪಿಸುತ್ತಿವೆ. ಕಾಶ್ಮೀರೀ ರಾಜಕಾರಣಿಗಳೂ ಕೂಡ ಬಲವಾಗಿ ವಿರೋಧಿಸುತ್ತಿದ್ದಾರೆ.