ಶಿರಸಿ : ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೋರ್ವಳು ಕಾಲೇಜಿನ ಶೌಚಾಲಯದ ಕಿಟಕಿಗೆ ವೇಲು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜೆ.ಎಮ್.ಜೆ. ಕಾಲೇಜಿನಲ್ಲಿ ನಡೆದಿದೆ.

ಶಿರಸಿಯ ಜೆ.ಎಂ.ಜೆ ಕಾಲೇಜಿನ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಹಾವೇರಿಯ ನೆಗಳೂರಿನ ಮೊಬಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಬಕ್ರೀದ್ ಆಚರಣೆಗೆ ಹಾವೇರಿಗೆ ತೆರಳಿದ್ದ ವಿದ್ಯಾರ್ಥಿನಿ, ಬುಧವಾರ ವಾಪಾಸ್ ಶಿರಸಿಗೆ ಬಂದಿದ್ದಳು. ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋದ ವಿದ್ಯಾರ್ಥಿನಿ, ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

RELATED ARTICLES  ಜನ ಜಾಗ್ರತಿಗಾಗಿ ಕೈಗಾದಲ್ಲಿ ವಿಕಿರಣ ಸೋರಿಕೆಯ ಅಣಕು ‌ಕಾರ್ಯಾಚರಣೆ

ಅತ್ಯಂತ ಬುದ್ಧಿವಂತ ವಿದ್ಯಾರ್ಥನಿಯಾಗಿದ್ದ ಮೊಬಿನ್, ಎಸ್.ಎಸ್.ಎಲ್.ಸಿ. ಯಲ್ಲಿ ನವೋದಯ ಶಾಲೆಯಲ್ಲಿ ಶೆ.೯೭ ರ ಫಲಿತಾಂಶ ಸಾಧಿಸಿದ್ದಳು. ಪ್ರವಾಹ ಇರುವ ಕಾರಣ ಒಂದು ವಾರ ಮನೆಯಲ್ಲಿ ಉಳಿದುಕೊಂಡಿದ್ದ ಮೊಬಿನ್, ತನ್ನ ಹೆಣವನ್ನು ಅಪ್ಪನ ಮನೆಗೆ ತೆಗೆದುಕೊಂಡು ಹೋಗುವುದು ಬೇಡ.‌ಬದಲಿಗೆ ಅಜ್ಜಿ ಮನೆಯಲ್ಲಿ ದಫನ್ ಮಾಡಿ ಎಂದು ಡೆತ್ ನೋಟ್ ‌ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

RELATED ARTICLES  ಶಾಲೆಯಲ್ಲಿ ಶಿಕ್ಷಕರ ಕೊರತೆ - ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಿದ ಕಬ್ಬರ್ಗಿ ಗ್ರಾಮಸ್ಥರು : ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಶಾಸಕರು.

ಕಾಲೇಜಿನ ‌ಇನ್ನೊರ್ವ ವಿದ್ಯಾರ್ಥಿನಿ ಶೌಚಾಲಯಕ್ಕೆ ತೆರಳಿದಾಗ ಬಾಗಿಲು ತೆಗೆಯದ ಕಾರಣ ಅನುಮಾನಗೊಂಡು ಕಾಲೇಜಿನ ಶಿಕ್ಷಕಿಗೆ ತಿಳಿಸಿ ಅವರು ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ತತ್ವಬಂದಿದೆ. ತಕ್ಷಣವೇ ವೇಲನ್ನು ಕತ್ತರಿಸಿದರೂ ಪ್ರಾಣ ಉಳಿದಿಲ್ಲ ಎನ್ನಲಾಗಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.