ಕುಮಟಾ: ಮಾನವ್ಯ ಕವಿಯೆಂದೇ ನಾಮಾಂಕಿತ ಡಾ. ಬಿ.ಎ.ಸನದಿ ಅವರ ಜನ್ಮದಿನವಾದ ನಾಳೆ ಅ. 18 ರಂದು ಅವರ ಹೆಸರಿನಲ್ಲಿ ಕೊಡಮಾಡುವ ಸನದಿ ಕಾವ್ಯ ಪ್ರಶಸ್ತಿ ಸಮಾರಂಭವನ್ನು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ಡಾ.ಬಿ.ಎ.ಸನದಿ ಸಾಹಿತ್ಯ ಸಂಘ ಹಾಗೂ ರೋಟರಿ ಕ್ಲಬ್ ಕುಮಟಾ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಸನದಿ ಬುಕ್ ಕಾರ್ನರ್ ಉದ್ಘಾಟನೆ ಹಾಗೂ ವಿದ್ಯಾರ್ಥಿ ಕವಿಗೋಷ್ಠಿ ಸಂಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಸನದಿ ಸುಪುತ್ರ ನಿಸಾರ್ ಸನದಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಕಮಲಾ ಬಾಳಿಗಾ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರೀತಿ ಭಂಡಾರಕರ ಹಾಗೂ ಕವಿ ಸನದಿ ಪತ್ನಿ ನಸಿರಾ ಸನದಿ ಉಪಸ್ಥಿತರಿರುವರೆಂದು ಡಾ. ಸನದಿ ಸಾಹಿತ್ಯ ಸಂಘದ ಅಧ್ಯಕ್ಷ ಎನ್.ಆರ್.ಗಜು, ಸಂಚಾಲಕ ಸುರೇಶ ಪೈ, ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಭಟ್, ಕಾರ್ಯದರ್ಶಿ ಕಿರಣ ನಾಯಕ ತಿಳಿಸಿದ್ದಾರೆ.

RELATED ARTICLES  ಕಂದಾಯ ಸಚಿವರಿಗೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ'ದ ಕುರಿತು ಮಾಹಿತಿ ನೀಡಿದ ಕಾರ್ಯಕರ್ತರು.

ಕವಿಗೋಷ್ಠಿಯಲ್ಲಿ ಶ್ವೇತಾ ಬೊಮ್ಮಯ್ಯ ನಾಯ್ಕ ಅಚವೆ ಅಂಕೋಲಾ, ಮುಕ್ತಾ ಭಟ್ ಕುಮಟಾ, ಸುಮಾ ಗಜಾನನ ನಾಯ್ಕ ಹಳದೀಪುರ, ಗಾಯತ್ರಿ ಪಟಗಾರ ಕುಮಟಾ, ಸುಮಾ ವಿಶ್ವೇಶ್ವರ ಭಟ್ ಯಲ್ಲಾಪುರ, ಭವ್ಯಾ ಚಂದ್ರಶೇಖರ ಭಟ್ ಕೆಕ್ಕಾರ, ಗೀತಾ ಸಂದಿಗೋಡಮಠ ಧಾರವಾಡ, ಎಸ್.ಬಿ.ಚಂದನಾ ಹಾನಗಲ್ಲ ಪಾಲ್ಗೊಳ್ಳಲಿದ್ದಾರೆ.

RELATED ARTICLES  ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಬರೆದು ವಿರೂಪ.