ಕುಮಟಾ: ಇಂದು ಮೂರೂರು ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಜಾನನ ಪೈ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆಹಾವಳಿ ಸಂತ್ರಸ್ತರಿಗೆ ಕಳುಹಿಸಿದ ದಿನಬಳಕೆಯ ಸರಕು ಸಾಮಗ್ರಿಗಳನ್ನು ತಮ್ಮ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.

RELATED ARTICLES  ಕಾರವಾರ ಆಸ್ಪತ್ರೆಯಿಂದ ಕೊರೋನಾ ಸೋಂಕಿತ 6 ಜನ ಡಿಶ್ಚಾರ್ಜ

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂತ್ರಸ್ತರ ಪರವಾಗಿ ನಮ್ಮ ಸರ್ಕಾರ ಸದಾ ಇರಲಿದೆ, ನೆರೆಹಾವಳಿಯಿಂದ ತಮ್ಮ ಮನೆಗಳನ್ನು ಕಳೆದುಕೊಂಡವರು, ಜಾನುವಾರುಗಳನ್ನು ಕಳೆದುಕೊಂಡವರು, ದಿನಬಳಕೆಯ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಷ್ಟ ಅನುಭವಿಸಿದವರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳುವುದು ಬೇಡಾ, ನಮ್ಮ ಸರ್ಕಾರ ಸಧಾ ತಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಧೈರ್ಯ ತುಂಬಿದರು.

RELATED ARTICLES  ಮಳೆಯ ಅವಾಂತರ : ಬೈಕ್‌ ಮೇಲೆ ಮರ ಬಿದ್ದು ಬಲಿಯಾದ ತಂದೆ ಮಗ