ಶಿರಸಿ: ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ನೃತ್ಯ ವಿಭಾಗದ ಭರತನಾಟ್ಯ ಸೀನಿಯರ್ ಸ್ಪರ್ಧೆಯಲ್ಲಿ ತಾಲೂಕಿನ ಅಗಸಾಲ ಬೊಮ್ಮ್ನಳ್ಳಿಯ ಪೃಥ್ವಿ ಹೆಗಡೆ 600ಕ್ಕೆ 533 ಅಂಕ ಗಳಿಸುವ ಮೂಲಕ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ. ಈಕೆಯು ಅಗಸಾಲ ಬೊಮ್ನಳ್ಳಿಯ ಶ್ರೀಮತಿ ಗೀತಾ ಮತ್ತು ರಮಾಕಾಂತ ಹೆಗಡೆ ಅವರ ಪುತ್ರಿಯಾಗಿದ್ದು, ಶಿರಸಿಯ ನೂಪುರ ನೃತ್ಯಶಾಲೆಯ ವಿದೂಷಿ ಶ್ರೀಮತಿ ಅನುರಾಧಾ ಹೆಗಡೆ ಇವರ ಬಳಿ ನೃತ್ಯ ಅಭ್ಯಸಿಸುತ್ತಿದ್ದಾಳೆ. ಸಂಗೀತದಲ್ಲಿಯೂ ಈಕೆ ಜ್ಯೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪ್ರಸ್ತುತ ನಗರದ ಎಮ್ಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

RELATED ARTICLES  ತಪ್ಪು ಮಾಹಿತಿ ನೀಡಿದ ಗ್ರಾ.ಪಂ. ಕಾರ್ಯದರ್ಶಿ : ಮಾಹಿತಿ ಹಕ್ಕಿನಿಂದ ಬಹಿರಂಗ