ಕುಮಟಾ : ಮಾಜಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹಾಲಿ ಹಳಿಯಾಳ ಕ್ಷೇತ್ರದ ಶಾಸಕರು ಆದ ಶ್ರೀ ಆರ್. ವಿ.ದೇಶಪಾಂಡೆಯವರು ಇಂದು ತಾಲೂಕಿನ ಕೆಲವು ನೆರೆಪೀಡಿತ ಪ್ರದೇಶಗಳಾದ ಕೊಡಕಣಿ, ಮಿರ್ಜಾನದ ತಾರೀಬಾಗಿಲು, ದೀವಗಿಯ ಹರಕಡೆ ಕ್ರಾಸ್ ಗಳಿಗೆ ಭೇಟಿನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

RELATED ARTICLES  ಮಾರುಕಟ್ಟೆಗೆ ಬರಲಿದೆ ಮೇಡ್​ ಇನ್ ಇಂಡಿಯಾ ನಿರ್ಮಿತ ಐಫೋನ್​ : ಬೆಲೆಯೂ ಕಡಿಮೆ

ಮಾಜಿ ಸಚಿವರು ಸಂತ್ರಸ್ತರಿಂದ ಹಾನಿಯ ಮಾಹಿತಿ ಪಡೆದು, ಶೀಘ್ರ ಪರಿಹಾರ ನೀಡವಂತೆ ಹಾಗೂ ಸಮಸ್ಯೆ ಪರಿಹರಿಸುವಂತೆ ತಹಶೀಲ್ದಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀಮತಿ ಶಾರದಾ ಶೆಟ್ಟಿ, ಮುಖಂಡರಾದ ರವಿಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು, ಹೊನ್ನಪ್ಪ ನಾಯಕ, ಸುರೇಖಾ ವಾರೀಕರ್ ಮುಂತಾದ ಪಕ್ಷದ ಹಿರಿಯ ಕಿರಿಯ ಮುಖಂಡರು ಹಾಜರಿದ್ದರು.

RELATED ARTICLES  ನಾಲ್ಕು ವರ್ಷಗಳಿಂದ ಸತತ 100% ಫಲಿತಾಂಶ : ಸಾಧನೆ ಮಾಡಿದ ಧಾರೇಶ್ವರದ ದಿನಕರ ಆಂಗ್ಲಮಾಧ್ಯಮ ಪ್ರೌಢಶಾಲೆ