ಹೊನ್ನಾವರ : ಚದುರಂಗ ಕ್ಷೇತ್ರದ ವಿಶೇಷ ಪ್ರತಿಭೆ, ಹೊನ್ನಾವರದ ಸಮರ್ಥ ಜಗದೀಶ ರಾವ್ ಇವನಿಗೆ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಸಂಸ್ಥಾನದವರು ಪ್ರತಿಭಾಪುರಸ್ಕಾರ ನೀಡಿ ಅನುಗ್ರಹಿಸಿದರು.

ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ವಿಕಲ ಚೇತನರ ಚೆಸ್ ಚಾಂಪಿಯನ್ ಶಿಪ್ ನ 7 ಸುತ್ತಿನಲ್ಲಿ 5.5 ಅಂಕ ಗಳಿಸಿ, ದೈಹಿಕ ದುರ್ಬಲ ರ ವಿಭಾಗದಲ್ಲಿ ಸಮರ್ಥ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅನುಪಮ ಸಾಧನೆಗೈದಿದ್ದಾನೆ.

RELATED ARTICLES  ಈದ್ ಮಿಲಾದ್ ಮೆರವಣಿಗೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ : ಅಶೋಕ ಚಕ್ರದ ಬದಲು ಅರ್ಧ ಚಂದ್ರ : ಕುಮಟಾದ ಮಿರ್ಜಾನಿನಲ್ಲಿ ಘಟನೆ.

ಹೊನ್ನಾವರದ ಎಸ್.ಡಿ.ಎಂ ಕಾಲೇಜ್ ನಲ್ಲಿ 2ನೇ ಬಿ.ಕಾಮ್ ನಲ್ಲಿರುವ ಸಮರ್ಥ್ ಜಗದೀಶ್ ರಾವ್ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಎರಡನೇ ಬಾರಿ ಅಮೆರಿಕದಲ್ಲಿ ಹಾರಿಸಿದ್ದಾನೆ.

ಚೆಸ್ ತರಬೇತುದಾರ ಅಜಿತ್. ಎಂ.ಪಿ. ಮೈಸೂರು ಇವರ ಶಿಷ್ಯನಾಗಿರುವ ಸಮರ್ಥ,
ಈ ಮೊದಲು, ದಿ. ಶ್ರೀ ವಿ ಆರ್. ಶಾಸ್ತ್ರಿ ಹೊನ್ನಾವರ. ಪ್ರಸಾದ್ ಹೆಗ್ಡೆ ಸಿರ್ಸಿ, ವಿನಯ್ ಕುಮಾರ್ ಹಿರೇಮಠ ಸಿರ್ಸಿ, ಜ್ಯೋತಿ ಪ್ರಕಾಸಮ್ ಮಧುರೈ, ಶ್ರೀನಿಧಿ ಶ್ರೀಪತಿ ಚೆನ್ನೈ, ಸ್ವರಾಜ್ ಪಾಲಿಟ್ ಜಾರ್ಖಂಡ್, ಕಪಿಲ್ ಲೋಹಾನ್ ಪೂನಾ ಇವರ ಬಳಿ ಚೆಸ್ ತರಬೇತಿ ಪಡಿದಿರುತ್ತಾನೆ.

RELATED ARTICLES  ಗೋಳಿ ಪ್ರೌಢಶಾಲೆಯಲ್ಲಿ ನಡೆದ “ವಿಶ್ವ ಯೋಗ ದಿನಾಚರಣೆ”

ಇವನು ಹೊನ್ನಾವರ ಮಂಡಲಾಂತರ್ಗತ ಹೊನ್ನಾವರ ವಲಯದ ಜಗದೀಶ ರಾವ್ ಹಾಗೂ ವಿನುತ ಭಟ್ ಇವರ ಸುಪುತ್ರ. ಶ್ರೀಗುರುಗಳ ಆಶೀರ್ವಾದದಿಂದ ಈ ಬಹುಮಾನ ದೊರಕಿದೆ. ಗುರುರಕ್ಷೆ ಹೀಗೆ ಇರಲೆಂದು ಜಗದೀಶ ರಾವ್ ಕುಟುಂಬ ತಮ್ಮ ಭಾವವನ್ನು ವ್ಯಕ್ತಪಡಿಸಿದ್ದಾರೆ.