ಕಾರವಾರ: ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370ನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವಾಗಿನಿಂದ ಭಾರತದ ಮೇಲೆ ದಾಳಿ ಮಾಡಲು ಕಾಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯ ಎಚ್ಚರಿಕೆ ಮೇರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದಾಗಿನಿಂದ ಭಾರತದ ಮೇಲೆ ಯಾವ ರೀತಿಯಲ್ಲಿ ದಾಳಿ ನಡೆಸಬಹುದು ಎಂದು ಹೊಂಚು ಹಾಕುತ್ತಲೇ ಇದೆ. ಪಾಕ್ ಉಗ್ರ ಸಂಘಟನೆ ಭಾರತದ ಮೇಲೆ ದಾಳಿ ನಡೆಸಿ ತನ್ನ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ. ಭಾರತೀಯ ಗುಪ್ತಚರ ಇಲಾಖೆಯು ಈ ಮಾಹಿತಿಯನ್ನ ಕಲೆ ಹಾಕಿದ್ದು, ಉತ್ತರ ಕನ್ನಡ ಜಿಲ್ಲೆಯು ಅಂದಾಜು 150 ಕಿ.ಮೀ ಕರಾವಳಿ ಪ್ರದೇಶವನ್ನು ಹೊಂದಿದ್ದು, ಅರಬ್ಬೀ ಸಮುದ್ರದ ಮೂಲಕ ಉಗ್ರರು ಒಳನುಸುಳಬಹುದಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.

RELATED ARTICLES  ಪುಲ್ವಾಮದಲ್ಲಿ ಉಗ್ರರ ದಾಳಿ; ಇಬ್ಬರು ಪೊಲೀಸರು ಸಾವು