ಭಟ್ಕಳ- ಶ್ರೀವಲಿ ಪ್ರೌಢಶಾಲೆಯ ಸಾಹಿತ್ಯ ಸಂಘದಿಂದ ಇಂದು ಶನಿವಾರ ಅರ್ಥಪೂರ್ಣ ವಾಗಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
ಕಳೆದ ಹತ್ತು ವರ್ಷದಿಂದ ಶ್ರೀವಲಿ ಸಾಹಿತ್ಯ ಸಂಘದ ವತಿಯಿಂದ ಮಾರ್ಗದರ್ಶಿ ಶಿಕ್ಷಕಿಯಾದ ರೇಷ್ಮಾ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬರುತ್ತಿರುವ ರಕ್ಷಾಬಂಧನ ಕಾರ್ಯಕ್ರಮ ಈ ವರ್ಷವೂ ತುಂಬಾ ಅಚ್ಚುಕಟ್ಟಾಗಿ ಅರ್ಥಪೂರ್ಣ ವಾಗಿ ನಡೆಯಿತು.
ವೇದಿಕೆ ಕಾರ್ಯಕ್ರಮವನ್ನು ನಿರೂಪಣೆ, ಸ್ವಾಗತ, ವಂದನಾರ್ಪಣೆ ಎಲ್ಲವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ಮಮತಾ ಭಟ್ಕಳ ಅವರ ಜೊತೆ ಶಿಕ್ಷಕ ವೃಂದದವರೆಲ್ಲ ಹಾಜರಿದ್ದರು.
ಸಹೋದರತೆ ಭಾತೃತ್ವ ಬಾಂಧವ್ಯ ಬೆಸೆಯುವ ಈ ಮಹತ್ವಪೂರ್ಣ ಹಬ್ಬವನ್ನು ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟುವ ಮೂಲಕ ಸಂಭ್ರಮಿಸಿದರು. ರಕ್ಷೆ ಕಟ್ಟುವಾಗ ಸಹೋದರ ಸಹೋದರಿಯರಿಲ್ಲದ ಕೊರಗನ್ನ ನೀಗಿಸದ ಅನುಭವ ಕೆಲವು ವಿದ್ಯಾರ್ಥಿಗಳಲ್ಲಿ ಆಗಿದನ್ನು ಅವರ ಕಣ್ಣುಗಳಲ್ಲಿ ಕಂಡುಬಂದಿತು.