ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ದ್ವಿಚಕ್ರ ವಾಹನ ದುರಸ್ಥಿಗಾರ ಸಂಘದ ಸರ್ವ ಸದಸ್ಯರು ಸೇರಿ ಕರ್ನಾಟಕ ದ್ವಿಚಕ್ರವಾಹನ ವರ್ಕ್ಶ ಶಾಪ್ ಮಾಲೀಕರು ಮತ್ತು ತಂತ್ರಜ್ಞಾನ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಅಂಕೋಲಾ ತಾಲೂಕಿನ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಸಾಮಗ್ರಿ ವಿತರಿಸಿದರು.
ಸಂಕಗುಳೆ, ರಾಜನ್ಗುಳೆ, ಸುಂಕಸಾಳ, ಹೆಬ್ಬುಲ, ಹೊಸಕಂಬಿ ಈ ಪ್ರದೇಶಗಳಿಗೆ ಅಂದಾಜು 35 ಕುಟುಂಬಗಳಿಗೆ 3.5 ಕಿ ಮೀಟರ್ ನಷ್ಟು ಕಾಲ್ನಡಿಗೆಯಲ್ಲಿ ಸಾಗಿ ನೆರೆ ಪೀಡಿತ ಸಂತ್ರಸ್ತರಿಗೆ ಅಕ್ಕಿ, ಬಿಸ್ಕೆಟ್, ಕುಡಿಯುವ ನೀರು, ಸೀರೆ, ನೈಟಿ, ಪ್ಯಾಂಟ್, ಶರ್ಟ್, ಸೋಪ್, ಪಿನಾಯಿಲ್, ಸೋಪ್, ಚಾಪೆ, ಬೆಡ್ ಶಿಟ್ ಇನ್ನು ಹಲವು ಗ್ರಹ ಉಪಯೋಗಿ ಸಾಮಗ್ರಿಗಳನ್ನು ಸ್ವಯಂ ಸೇವೆ ಯಿಂದ ನೀಡಿದ್ದಾರೆ.