ಅಂಕೋಲಾ: ಆಶ್ಲೇಷಾ ಮಳೆಯ ರುದ್ರ ನರ್ತನಕ್ಕೆ ಜಿಲ್ಲೆ ಮಾತ್ರವಲ್ಲದೆ ಇಡಿ ಕರ್ನಾಟಕವೇ ತತ್ತರಿಸುವ ದೃಶ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ, ಪ್ರವಾಹದಿಂದ ಸಾಕಷ್ಟು ಜನರು ಮನೆ ಮಠ ಕಳೆದು ಕೊಂಡು ಬದುಕನ್ನು ಕತ್ತಲಾಗಿಸಿಕೊಂಡಿದ್ದು ನಿಜಕ್ಕೂ ಒಂದು ದುರಂತವೆ ಸರಿ. ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರನ್ನು ರಕ್ಷಿಸಲು ಸಾಕಷ್ಟು ಜನರು, ಸ್ವಯಂ ಸೇವ ಕಾರ್ಯಕರ್ತರು, ಪೋಲಿಸ್ ಇಲಾಖೆ ಮುಂತಾದವರು ಇದ್ದಾರೆ. ಅದರಲ್ಲಿ ಮಾನವಿಯ ಗುಣವುಳ್ಳ ಪೋಲಿಸ್ ಅಧಿಕಾರಿ ಶ್ರೀಧರ ಎಸ್ ಆರ್.
ಯಲ್ಲಾಪುರ ಠಾಣೆಯಿಂದ ಅಂಕೋಲಾ ಠಾಣೆಗೆ ವರ್ಗವಾಗಿ ಬಂದ ಶ್ರೀಧರ ಎಸ್ ಆರ್ ರವರ ಕಡಿಮೆ ಅವಧಿಯಲ್ಲಿಯೇ ಜನಪ್ರಿಯತೆಯನ್ನು ಗಳಿಸಿದ್ದರು. ಗಂಗಾವಳಿ ನದಿಗೆ ಪ್ರವಾಹ ಬಂದ ಕಾರಣ ಅಂಕೋಲಾ-ಹುಬ್ಬಳ್ಳಿ ಸಂಪರ್ಕ ಸಂಪೂರ್ಣ ಕಡಿತ ಗೊಂಡಿತು. ಸಾಕಷ್ಟು ಜನರು, ಲಾರಿ ಚಾಲಕರು ಪ್ರವಾಹಕ್ಕೆ ಸಿಲುಕಿಕೊಂಡರು. ಹೈಲ್ಯಾಂಡ್ ಹೊಟೇಲ್ ಪಕ್ಕದಲ್ಲಿ 112 ಜನರು ಹೈದರಾಬಾದ್ ಮತ್ತು ಪುಣೆಯಿಂದ ಬಂದಿದ್ದ ಪ್ರಯಾಣಿಕರು ನೆರೆಗೆ ಸಿಲುಕಿದಾರೆಂದು ಮನಗಂಡ ಶ್ರೀಧರ ಎಸ್ ಆರ್ ರವರು ಸ್ಥಳೀಯ ಜನರ ನೆರವಿನೊಂದಿಗೆ ದೋಣಿ ವ್ಯವಸ್ಥೆ ಮಾಡಿಸಿ ಅಂಕೋಲಾಕ್ಕೆ ಸ್ಥಳಾಂತರಿಸುವಲ್ಲಿ ನೆರವಾದರು. ಸಾಕಷ್ಟು ಜನರಿಗೆ ಸಾಂತ್ವನ ಹೇಳಿದರು, ನೆರವಾದರು ಇಂತಹ ಪೋಲಿಸ್ ಅಧಿಕಾರಿ ಅಂಕೋಲಿಗರ ಭಾಗ್ಯವೇ ಸರಿ.
ಹಿಚ್ಕಡದ ಕೂರ್ವೆ ನಡುಗದ್ದೆಯಿಂದ ಶಿರೂರ , ಅಗ್ರಗೋಣ, ಜೂಗ , ಶೆಡಿಕಟ್ಟದಲ್ಲಿ ಪ್ರವಾಹದಿಂದ ನಿರಾಶ್ರಿತರಾದವರನ್ನು ಸ್ಥಳೀಯರ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಅಂಕೋಲಾ ತಾಲ್ಲೂಕಿನ ಡೊಂಗ್ರಿ, ಹೆಗ್ಗಾರ, ಬಿದರಳ್ಳಿ ಗ್ರಾಮದ ಜನರು ಸೇತುವೆ ಕುಸಿತದಿಂದಾಗಿ ರಸ್ತ ಸಂಪರ್ಕವನ್ನು ಕಡಿತಗೊಂಡು ಆಹಾರಕ್ಕಾಗಿ ಪರಿತಪಿಸ ಬೇಕಾಯಿತು. ಈ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ಶ್ರೀಧರ ಎಸ್ ಆರ್ ರವರು ದೋಣಿಯ ಮೂಲಕ ಸ್ವಯಂ ಸೇವಕರ ನೆರವಿನೊಂದಿಗೆ ಸಂಚರಿಸಿ ಆಹಾರ ಧಾನ್ಯ, ಅಗತ್ಯ ಔಷಧಿಯನ್ನು ವಿತರಿಸಿದರು. ಮತ್ತೊಮ್ಮೆ ತಮ್ಮ ಮಾನವಿಯ ಗುಣವನ್ನು ಪ್ರದರ್ಶಿಸಿದರು ಸಧ್ಯ ಅಂಕೋಲಾ ಠಾಣೆಯಲ್ಲಿ ಉಪ ನಿರಿಕ್ಷಕರಾಗಿರುವ ಶ್ರೀಧರ ಎಸ್ ಆರ್ ರವರು ಇದಕ್ಕೂ ಯಲ್ಲಾಪುರ, ಕಾರವಾರದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳು, ಸರ್ಕಾರ ಇವರನ್ನು ಗೌರವಿಸಿದೆ.
ಪ್ರವೀಣ ಜಿ ಶೆಟ್ಟಿ ಅಂಕೋಲಾ