ಭಟ್ಕಳ: ದೋಣಿ ಇಡುವ ಸ್ಥಳದಲ್ಲಿ ನಿರ್ವಿುಸುತ್ತಿದ್ದ ಗೇಟಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಪಿಡಿಒ ಕ್ರಮ ಖಂಡಿಸಿ ನೂರಾರು ಮೀನುಗಾರರು ಮುರ್ಡೆಶ್ವರ ಕಡಲ ತೀರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ತೀರದಲ್ಲಿ ದೋಣಿಯ ಮೀನುಗಾರರಿಗಾಗಿ ದೋಣಿ ಇಡಲು ಕಾಂಕ್ರೀಟ್ನಿಂದ ಇಳಿದಾಣ ನಿರ್ವಿುಸಲಾಗಿತ್ತು. ದೋಣಿ ಇಡುವ ಸ್ಥಳದಲ್ಲಿ ಖಾಸಗಿ ವಾಹನಗಳು ಸಂಚಾರ, ರ್ಪಾಂಗ್ ಮಾಡುತ್ತಿದ್ದವು. ಇದರಿಂದ ದೋಣಿಗಳಿಗೆ ಹಾನಿ ಆಗುತ್ತಿದೆ ಎಂದು ಮೀನುಗಾರರು ಮೈದಾನಕ್ಕೆ ತೆರಳುವ ಸ್ಥಳಕ್ಕೆ ಗೇಟ್ ನಿರ್ವಿುಸಲು ಉದ್ದೇಶಿಸಿದ್ದರು. ಗೇಟ್ ನಿರ್ವಣದಿಂದ ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಿಇಒ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.
ಆ. 15ರಂದು ಭಟ್ಕಳ ಇಒ ಲಕ್ಷ್ಮೀ ನಾರಾಯಣ ಸ್ವಾಮಿ ಮಾವಳ್ಳಿ- 2 ಪಂಚಾಯಿತಿ ಪಿಡಿಒ ಅವರಿಗೆ ಅದನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಅದರಂತೆ ಪಂಚಾಯಿತಿ ಸಿಬ್ಬಂದಿ ತೆರಳಿ ಗೇಟ್ ನಿರ್ವಣದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದರು.
ಸ್ಥಳೀಯ ಮೀನುಗಾರರು ಸೋಮವಾರ ಮತ್ತೆ ಕಾಮಗಾರಿ ಮುಂದುವರಿಸಿದ್ದು, ಕಾಮಗಾರಿ ನಿಲ್ಲಿಸಿ, ಸಂಪೂರ್ಣ ಮಾಹಿತಿ ನೀಡುವಂತೆ ಮತ್ತೆ ಭಟ್ಕಳದ ಇಒ ಅವರು ಪಿಡಿಒ ಅವರಿಗೆ ಆದೇಶಿಸಿದ್ದರು. ಮಾವಳ್ಳಿ- 2ರ ಸಿಬ್ಬಂದಿ ಅದನ್ನು ತೆರವುಗೊಳಿಸುತ್ತಿದ್ದಂತೆ ಮುರ್ಡೆಶ್ವರ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣಾ ಹರಿಕಾಂತ, ರಾಜೇಶ ಹರಿಕಾಂತ, ಪರಮೇಶ್ವರ ಮಾಸ್ತಪ್ಪ ಮೊಗೇರ ಸೇರಿ ನೂರಾರು ಸಂಖ್ಯೆಯ ಮೀನುಗಾರರು ಪ್ರತಿಭಟಿಸಿದರು.