ಕುಮಟಾ : ಇತ್ತೀಚೆಗೆ ಪ್ರವಾಹದಿಂದಾಗಿ ಬಂಗಣೆ ಮತ್ತು ಮೋರ್ಸೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ತೂಗುಸೇತುವೆ ಕೊಚ್ಚಿಕೊಂಡು ಹೋಗಿದ್ದು, ಪರಿಣಾಮ ಆ ಎರಡು ಗ್ರಾಮಗಳ 9 ವಿದ್ಯಾರ್ಥಿಗಳು ಕಲಿಕೆಗೆ ಶಾಲೆಗೆ ಬರಲು ತೊಂದರೆ ಉಂಟಾಗಿತ್ತು.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿಂದು 101 ಕರೊನಾ ಕೇಸ್ : ಮೂವರನ್ನು ಬಲಿಪಡೆದ ನಂಜು

ಈ ಕುರಿತಂತೆ ವಿದ್ಯಾರ್ಥಿಗಳು ತಮ್ಮ ಅಳಲನ್ನು ಮಾನ್ಯ ಶಾಸಕರ ಬಳಿ ತೋಡಿಕೊಂಡಿದ್ದರು.

ಇಂದು ಆ ಕುರಿತಂತೆ ವಿದ್ಯಾರ್ಥಿಗಳ ಜೊತೆ ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಸೊಪ್ಪಿನಹೊಸಳ್ಳಿ ಗ್ರಾಮಪಂಚಾಯತಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಅವರ ಮನವಿಯನ್ನು ಸ್ವೀಕರಿಸಿ ಅವರ ಕಲಿಕೆಗೆ ಅನುಕೂಲವಾಗುವಂತೆ ಹಾಸ್ಟೆಲ್ ವ್ಯವಸ್ಥೆಯನ್ನು ಕುಮಟಾದಲ್ಲಿ ಮಾಡುವ ಭರವಸೆಯನ್ನು ನೀಡಿದರು.

RELATED ARTICLES  SSLC ಫಲಿತಾಂಶ ಪ್ರಕಟ : ಉತ್ತರಕನ್ನಡದ ವಿದ್ಯಾರ್ಥಿಗಳ ಉತ್ತಮ ಸಾಧನೆ.