ಕುಮಟಾ: ತಾಲೂಕಿನ ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಕುಟುಂಬಯೋಜನಾ ಸಂಘದ ಆಶ್ರಯದಲ್ಲಿ “ಹದಿಹರೆಯದವರ ಸಮಸ್ಯೆ” ಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಭಾರತೀಯ ಕುಟುಂಬ ಯೋಜನಾ ಸಂಘದ ಕೋಶಾಧಿಕಾರಿ ಬೀರಣ್ಣ ನಾಯಕರವರು ಹದಿಹರಯದಲ್ಲಿ ಸಮಸ್ಯೆಗಳು ಸಹಜ. ಅದಕ್ಕೆ ಎದೆಗುಂದಬಾರದು. ಹಿರಿಯರ ಮಾರ್ಗದರ್ಶನದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಖಂಡಿತಾ ಇದೆ ಎಂದರು. ಶಾಲಾ ಮುಖ್ಯಾಧ್ಯಾಪಕರಾದ ರವೀಂದ್ರ ಭಟ್ಟ ಸೂರಿ ಅಧ್ಯಕ್ಷತೆ ವಹಿಸಿ ಮಾತನಾಡಿ ” ಸಮಸ್ಯೆಗಳಿಲ್ಲದೇ ಜೀವನವೇ ಇಲ್ಲ . ಗರ್ಭದಿಂದ ಗೋರಿಯವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತದೆ. ಸಮಸ್ಯೆ ಎನ್ನುವುದು ಸಮುದ್ರದ ಅಲೆಗಳಿದ್ದ ಹಾಗೇ. ಅದು ಕಾಲ ಕೆಳಗಿನ ಮರಳನ್ನು ಜಾರಿಸಿ ಗಟ್ಟಿ ನೆಲದಲ್ಲಿ ನಮ್ಮನ್ನು ನಿಲ್ಲಿಸುವ ಹಾಗೇ ಸಮಸ್ಯೆಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ .

RELATED ARTICLES  ನಾಡಿನ ತುಂಬ ಜೋಗದ ಸಿರಿ ಚೆಲ್ಲಿದ ನಿಸಾರ್ ಅಹಮ್ಮದ್ ನಿಧನ ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕಂದಕ : ಅರವಿಂದ ಕರ್ಕಿಕೋಡಿ

“ಇದು ಹೀಗೇ ಇರದು” ಎಂಬ ವಾಕ್ಯವನ್ನು ಸದಾ ನೆನಪಿಟ್ಟುಕೊಳ್ಳಿ. ಸಮಸ್ಯೆಗಳು ಎದುರಾದಾಗ ಇದನ್ನು ನೆನಪಿಸಿಕೊಂಡು ಮುಂದಡಿ ಇಡಿ.ಅದು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

RELATED ARTICLES  ಕುಮಟಾ ವೈಭವದ ಆಮಂತ್ರಣ ಪತ್ರಿಕೆ ಬಿಡುಗಡೆ : ಕಾರ್ಯಕ್ರಮದ ಬಗ್ಗೆ ಸಂಘಟಕರ ಮಾಹಿತಿ : ನ.೧೬ ರಿಂದ ಕಾರ್ಯಕ್ರಮ.

ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ವೀಣಾ ನಾಯ್ಕ ಸ್ವಾಗತಿಸಿದರು, ಶ್ಯಾಮಲಾ ಎಂ ಪಟಗಾರ ವಂದಿಸಿದರು. ಮಂಗಲಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.