ಹೊನ್ನಾವರ : ಎಂ.ಪಿ,ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ 2019-20ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ದಿನಾಂಕ 21-8-2019 ರಂದು ನಡೆಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಗಣಪತಿ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ, ಗಿಡ ನೆಡುವುದು, ರಕ್ಷಿಸುವುದು ಸಣ್ಣ ವಿಷಯವಲ್ಲ ಅದು ಜಾಗತಿಕ ಸ್ವಾಸ್ಥ್ಯಕ್ಕೆ ನಮ್ಮ ಕೊಡುಗೆಯಾಗಿದೆ. ಪರಿಸರ ಹಾನಿ ಕೂಡಾ ನಮ್ಮ ತಪ್ಪಿನಿಂದಲೇ ಸಂಭವಿಸುವುದು ಆ ಕಾರಣ ವಿದ್ಯಾರ್ಥಿಗಳಾದ ತಾವೆಲ್ಲ ಪರಿಸರ ಸಂಬಂಧಿ ಕೆಲಸದಲ್ಲಿ ತೊಡಗಿರಿ ತಮ್ಮ ವ್ಯಕ್ತಿತ್ವ ಪರಿಸರ ಸ್ನೇಹಿಯಾಗಿರಲಿ. ಮಲೆನಾಡಿನಲ್ಲಿ ನಾವೆಲ್ಲ ಪರಿಸರವನ್ನು ಉಳಿಸಿಕೊಂಡಿದ್ದೇವೆ ಇದೇ ಕಾಳಜಿ ಮುಂದುವರಿಯಬೇಕೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಎಂ.ಎಚ್.ಭಟ್ಟ ರವರು ನಾವು ಏನೆ ಅಭಿವೃದ್ಧಿ ಹೊಂದಿದ್ದೇವೆ, ಏನೆಲ್ಲ ಸಾಧಿಸಿದ್ದೇವೆ ಎಂದುಕೊಂಡರು ಪರಿಸರದ ಸಹಾಯವಿಲ್ಲದೇ ಅಥವಾ ಅದರ ಒಡನಾಡವಿಲ್ಲದೇ ಒಂದು ಕ್ಷಣವೂ ಇರಲಾರೆವು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದರೆ ನಾವೆಲ್ಲ ಉಳಿಯುತ್ತೇವೆ ಎಂಬ ಕಿವಿ ಮಾತು ನುಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿ, ಕಾರ್ಯದರ್ಶಿಗಳಾದ ಎಸ್.ಎಂ.ಭಟ್ಟ, ಖಜಾಂಚಿಯಾದ ಉಮೇಶ ನಾಯ್ಕ ಹಾಗೂ ಕ್ರೀಡಾ ಕಾರ್ಯದರ್ಶಿ ಕು. ಶ್ರೀಧರ ಗೌಡ ಉಪಸ್ಥಿತರಿದ್ದರು.
ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ವಿನಾಯಕ ಭಟ್ಟ ಪ್ರಸ್ತಾವಿಕ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಪ್ರಧಾನ ಕಾರ್ಯದರ್ಶಿಯಾದ ನಿತಿನ್ ನಾಯ್ಕ ಸ್ವಾಗತಿಸಿದರು. ಉಪನ್ಯಾಸಕರಾದ ಎಂ.ಎನ್. ಅಡಿಗುಂಡಿ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿನಿ ಮಿಥಾಲಿ ಮಾವಿನಕುರ್ವಾ ವಂದಿಸಿದರೆ, ವಿಂದ್ಯಾ ಹೆಗಡೆ ಹಾಗೂ ಜೆ.ವಿ.ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು.