ಹೊನ್ನಾವರ – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ , ಮಾಜಿ ಶಾಸಕ ಉಮೇಶ ಭಟ್ಟ ಮನುಕುಲವನ್ನು ಪ್ರೀತಿಸುವ , ಎಲ್ಲಾ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರೊಂದಿಗೂ ವಿನಯದಿಂದ ಬೆರೆಯುವ ಮೇರು ವ್ಯಕ್ತಿತ್ವದ ಮಾನವತಾವಾದಿಯಾಗಿದ್ದರೂ ಎಂದು ಖ್ಯಾತ ಚಿಂತಕ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ, ಇತ್ತೀಚಿಗೆ ನಿಧನ ಹೊಂದಿದ ಮಾಜಿ ಶಾಸಕ ದಿ.ಉಮೇಶ ಭಟ್ಟರ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾತನಾಡುತ್ತಿದ್ದರು. ಉಮೇಶ ಭಟ್ಟರು ಸಂಪ್ರದಾಯಸ್ಧ ಕುಟುಂಬದಿಂದ ಬಂದಿದ್ದರೂ, ಸಮಾಜದ ಎಲ್ಲಾ ಶೋಷಿತ ವರ್ಗದ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು ಎಂದು ಅವರ ಗುಣಗಾನ ಮಾಡಿದರು. ನಾನು ಅಂಕೋಲಾದಲ್ಲಿ ಕಾಲೇಜ್ ಉಪನ್ಯಾಸಕನಾಗಿ ಕಾರ್ಯರ್ನಿಹಿಸುತ್ತಿದ್ದ ಸಂಧರ್ಭದಲ್ಲಿ ವಾರಕ್ಕೆರಡುಬಾರಿಯಾದರೂ ಅವರನ್ನು ಸಂಪರ್ಕಿಸದೇ ಇರುತ್ತಿರಲಿಲ್ಲ.
ಅಂಕೋಲಾ ಸುತ್ತಮುತ್ತಲಿನಲ್ಲಿರುವ ಬಡ ವರ್ಗದವರಾದ ಆಗೇರ, ಪಡ್ತಿ, ಹಾಲಕ್ಕಿ ಸಮಾಜದವರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು. ಅವರು ಈ ಬಡವರ್ಗದಿಂದ ಪ್ರೀತಿಯಿಂದ ‘ ಉಮ್ಮಣ್ಣ ಭಟ್ಟ “ ಅಂತಾ ಕರೆಸಿಕೊಳ್ಳುವುದನ್ನು ಡಾ. ಶ್ರೀಪಾದ ಶೆಟ್ಟಿಯವರು ಅತ್ಯಂತ ರೋಚಕತೆಯಿಂದ ವಿವರಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ ನಾನು ಯುವ ಕಾಂಗ್ರೆಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನ್ನ ಕಾರ್ಯಚಟುವಟಿಕೆಯನ್ನು ಗಮನಿಸಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು. ಉಮೇಶ ಭಟ್ಟರನ್ನು ಕಳೆದುಕೊಂಡ ಉತ್ತರ ಕನ್ನಡ ಕಾಂಗ್ರೆಸ್ ಕಾರ್ಯಕರ್ತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಅವರು ದುಃಖಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು, ನ್ಯಾಯವಾದಿಗಳಾದ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ ಉಮೇಶ ಭಟ್ಟರಂತಹ ಸರಳ ವ್ಯಕ್ತಿತ್ವದ ರಾಜಕಾರಣಿಯನ್ನು ನಾನು ಕಂಡಿಲ್ಲ. ನನ್ನ ಅವರ ಆತ್ಮೀಯತೆ ಹೇಗಿತ್ತೆಂದರೆ ಅವರು ಯಾವತ್ತೂ ಏಕವಚನದಲ್ಲಿ ನನ್ನನ್ನು “ದೋಸ್ತಾ” ಅಂತಾ ಅತ್ಯಂತ ಪ್ರೀತಿಯಿಂದ ಸಂಭೊದಿಸುತ್ತಿದ್ದರು ಎಂದರು. ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ಅವರ ಮನೆಗೆ ತಪ್ಪದೇ ಹೋಗುತ್ತಿದ್ದೆ. ಹಾಗೆಯೇ ಅವರು ಕೂಡಾ ನಮ್ಮ “ಕರಿಕಾನಮ್ಮದೇವಿಯ“ ಭಕ್ತರಾಗಿದ್ದರಿಂದ ವರ್ಷಕ್ಕೊಮ್ಮೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಬಂದಾಗಲೆಲ್ಲಾ ತಪ್ಪದೇ ನನಗೆ ಪೋನ್ ಮಾಡಿ ಜೊತೆಯಲ್ಲಿಯೇ ದೇವಸ್ಥಾನಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಬಾವುಕರಾಗಿ ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮಾಜಿ ಶಾಸಕ ದಿ. ಉಮೇಶ ಭಟ್ಟರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಗಲಿದ ನಾಯಕನಿಗೆ ಒಂದು ನಿಮಿಷದ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟÀಕದ ಉಪಾಧ್ಯಕ್ಷ ಹುಸೇನ್ ಖಾದ್ರಿ, ಕಾಂಗ್ರೇಸ್ ಇಂಟಕ್ ಘಟಕ ಅಧ್ಯಕ್ಷ ಆಗ್ನೇಲ್ ಡಾಯಸ್, ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾ ಘಟಕದ ಅಧ್ಯಕ್ಷ ಜಕ್ರಿಯಾ ಸಾಬ್,À ಪಕ್ಷದ ಹಿರಿಯ ಮುಖಂಡರಾದ ಬಾಲಚಂದ್ರ ನಾಯ್ಕ, ಜೋಸೆಫ್ ಡಾಯಸ್, ಅಲೆಕ್ಸ್ ಪೌಲ್, ಅಲ್ಲು ಪರ್ನಾಂಡಿಸ್, ಕೃಷ್ಣ ಹರಿಜನ್, ಶ್ರೀಮತಿ ಅಕ್ಷತಾ ಮೇಸ್ತ, ಉದಯ್ ಮೇಸ್ತ, ಚಂದ್ರಶೇಖರ್ ಚಾರೋಡಿ, ಬ್ರಾಜಿಲ್ ಪಿಂಟೊ, ನೆಲ್ಸನ್ ರೊಡ್ರಗೀಸ್,ವಸಿಮ್ ಸಾಬ್, ಗಣಪತಿ ಗುನಗಾ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್‍ನ ಮುಸಾ ಅಣ್ಣಿಗೇರಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.