ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನಲ್ಲಿ ಹಮ್ಮಿಕೊಂಡ ವಿನಯಸ್ಮøತಿ ಹಾಗೂ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮವನ್ನು ನಿವೃತ್ತ ಸಂಪನ್ಮೂಲ ಶಿಕ್ಷಕರು, ಶಿಕ್ಷಣಪ್ರೇಮಿಗಳು ಆಗಿರುವ ಶ್ರೀ ಹೆಚ್. ಎನ್. ಪೈ ಹಳದಿಪುರ ಇವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ದಿ.ವಿನಯಾ ಶಾನಭಾಗರವರ ಸ್ತುತ್ಯಾರ್ಹ ಕಾರ್ಯಗಳನ್ನು ಶ್ಲಾಘಿಸಿ, ಶಿಕ್ಷಕರಿಗೆ ಅವರು ಮಾರ್ಗದರ್ಶಿಯಾಗಿದ್ದರು. ಶಿಕ್ಷಕನಾದವನು ದಿನದಿನವೂ ಹೊಸ ಹೊಸ ವಿಚಾರಗಳನ್ನು, ಪ್ರೇರಣೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದಾಗ ಆತ ಯಾವತ್ತೂ ಜೀವಂತವಾಗಿರುತ್ತಾನೆ ಎಂದು ದಿ. ವಿನಯಾ ಶಾನಭಾಗ ಅವರನ್ನು ಉದಾಹರಿಸಿದರು. ಅದೇ ರೀತಿ, ಕೊಂಕಣಿ ಭಾಷೆಯನ್ನು ಎಲ್ಲರೂ ಪ್ರೀತಿಸಿ ಬೆಳೆಸಬೇಕೆಂದು ಕರೆನೀಡಿ ಭಾಷಾ ಇತಿಹಾಸವನ್ನು ವಿವರಿಸಿದರು.


ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ದಿ. ವಿನಯಾ ಶಾನಭಾಗ ಅವರ ಹೆಸರಲ್ಲಿ ಪ್ರತಿ ವರ್ಷ ಕೊಡಲ್ಪಡುವ ವಿನಯಸ್ಮøತಿ ಸಮರ್ಥ ಶಿಕ್ಷಕ ಪುರಸ್ಕಾರವನ್ನು ಉಪ್ಪಿನ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಶ್ಯಾಮಲಾ ಹೆಗಡೆ ಇವರ ಹಿಂದುಳಿದ ಬಡ ಗ್ರಾಮೀಣ ವiಕ್ಕಳಿಗೆ ನೀಡಿದ ಶಿಕ್ಷಣ ಹಾಗೂ ಮಕ್ಕಳನ್ನು ಪಠ್ಯೇತರ ಚಟುವಟಿಕೆ, ಕ್ರೀಡೆ, ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಣಿಗೊಳಿಸಿದ ಎಲ್ಲಾ ರೀತಿಯ ಸೇವೆಯನ್ನು ಪರಿಗಣಿಸಿ ಅವರಿಗೆ ಈ ವರ್ಷದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನ್ನನ್ನು ಗುರುತಿಸಿ ಪರಿಗÀಣಿಸಿ ಈ ಪುರಸ್ಕಾರ ಕೊಟ್ಟದ್ದು ನಿಜಕ್ಕೂ ಹೆಮ್ಮೆ ಹಾಗೂ ಅತೀವ ಸಂತೋಷವನ್ನುಂಟುಮಾಡಿದೆ. ಅಭಿಮಾನದಿಂದ ಇದನ್ನು ಸ್ವೀಕರಿಸುತ್ತೇನೆ ಎಂದರು.
ಕೊಂಕಣಿ ಮಾನ್ಯತಾ ದಿವಸ್‍ನ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

RELATED ARTICLES  ವಿಧಾನಸೌಧ ವಜ್ರಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣ


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಶ್ರೀ ವಿಠ್ಠಲ ಆರ್. ನಾಯಕ ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಕಾರ್ಯಕ್ರಮಕ್ಕೆ ಶುಭಕೋರಿ, ವಿನಯಾ ಶಾನಭಾಗ ಹೆಸರಿನಲ್ಲಿ ನೀಡಿದ ಈ ಪ್ರಶಸ್ತಿ ನಿಜಕ್ಕೂ ನಮಗೆ ಗೌರವ ತಂದಿದೆ ಎಂದರು. ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮದ ಧ್ಯೇಯೋದ್ದೇಶ ವಿವರಿಸಿ ಸರ್ವರನ್ನೂ ಸ್ವಾಗತಿಸಿದರು. ಟ್ರಸ್ಟಿಗಳಾದ ಶ್ರೀ ರಮೇಶ ಪ್ರಭು, ಶ್ರೀ ರಾಮನಾಥ ಕಿಣಿ, ರಾಷ್ಟ್ರ ಪ್ರಶಸ್ತಿ ಶಿಕ್ಷಕರಾದ ಶ್ರೀ ಡಿ. ಎಂ. ಕಾಮತ, ಕೊಂಕಣದ ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಡಾ.ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ


ಶಿಕ್ಷಕ ಚಿದಾನಂದ ಭಂಡಾರಿ ಪರಿಚಯಿಸಿದರು, ಶ್ರೀ ರಮೇಶ ಪ್ರಭು ವಂದನಾರ್ಪಣೆ ಸಲ್ಲಿಸಿದರು, ಪ್ರಕಾಶ ಗಾವಡಿ ಹಾಗೂ ಕೊಂಕಣಿ ಭಾಷಾ ಶಿಕ್ಷಕ ಗೌರೀಶ ಭಂಡಾರಿ ನಿರೂಪಿಸಿದರು, ವಿದ್ಯಾರ್ಥಿಗಳಾದ ವೈಭವಿ ಶಾನಭಾಗ ಸಂಗಡಿಗರು ಕೊಂಕಣಿ ಭಾಷೆಯಲ್ಲಿ ಪ್ರಾರ್ಥಿಸಿದರು. ಕಾರ್ಯಕ್ರಮ ವಂದೇ ಮಾತರಂ ಗೀತೆಯೊಂದಿಗೆ ಸಂಪನ್ನಗೊಂಡಿತು.