ಕುಮಟಾ: ತಾಲೂಕಿನ ಹೆಗಡೆಯ ತಾರೀಬಾಗಿಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ” ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧ ವಿತರಣಾ ಕಾರ್ಯಕ್ರಮ” ನಡೆಯಿತು. ಭಾರತೀಯ ಕುಟುಂಬ ಯೋಜನಾ ಸಂಘ. ಕುಮಟಾದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ. ಜಿ.ಜಿ.ಹೆಗಡೆ. ಡಾ.ಅರ್ಚನಾ ಭಟ್ಟ. ಡಾ. ರಂಜನಾ ಹೆಗಡೆ ಪಾಲ್ಗೊಂಡು ಜನರ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಿ ಔಷಧ ವಿತರಿಸಿದರು.

RELATED ARTICLES  ಆಕಸ್ಮಿಕವಾಗಿ ಕಾಲುಜಾರಿ ಮನೆಯ ಮೇಲಿನಿಂದ ಬಿದ್ದು ವ್ಯಕ್ತಿ ಸಾವು

ಈ ಸಂದರ್ಭದಲ್ಲಿ ಹೆಗಡೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗವೇಣಿ ಹೆಗಡೆ. ಸದಸ್ಯ ಶಾಂತಾರಾಮ ನಾಯ್ಕ, ಭಾರತೀಯ ಕುಟುಂಬ ಯೋಜನಾ ಸಂಘದ ಕುಮಟಾ ಶಾಖೆಯ ಪ್ರಭಾರ ವ್ಯವಸ್ಥಾಪಕರಾದ ಜಿ.ಕೆ.ಭಟ್ಟ.ಸೂರಿ. ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು. ಪ್ರವಾಹ ಪೀಡಿತ ಪ್ರದೇಶದ ನೂರಾರು ಜನರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.

RELATED ARTICLES  ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್.