ಕುಮಟಾ:ಇಲ್ಲಿನ ಕೊಂಕಣ ಎಜ್ಯುಕೇಶನ್‍ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ವನಮಹೋತ್ಸವಕಾರ್ಯಕ್ರಮವನ್ನು ರೋಟರಿಕ್ಲಬ್ ಕುಮಟಾ ಹಾಗೂ ಕೊಂಕಣ ಎಜ್ಯುಕೇಶನ್‍ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಹಲವು ಒಳ್ಳೆಯ ಜಾತಿಯ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಇಂಟರ್ಯಾಕ್ಟ್ಕ್ಲನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾಎಸ್.ಎಫ್. ಪ್ರವೀಣಾಕುಮಾರ ಮಾತನಾಡಿ, ಹೆಚ್ಚೆಚ್ಚು ಗಿಡಗಳನ್ನು ಬೆಳೆಸಿ ಪರಿಸರ ಸಮತೋಲನ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಬರ, ಪ್ರವಾಹದಂತಹ ಪೃಕೃತಿ ವಿಕೋಪಗಳನ್ನು ತಡೆಯಲು ಸಾಧ್ಯಎಂದರು. ವಿದ್ಯಾರ್ಥಿಗಳಿಗೆಗುರಿ ಮುಖ್ಯಎಂದಅವರು ಪ್ರಾತ್ಯಕ್ಷಿಕೆಯ ಮೂಲಕ ಮನದಟ್ಟು ಮಾಡಿಸಿದ್ದು ವಿಶೇಷವಾಗಿತ್ತು.
ತದನಂತರ ಮಾತನಾಡಿದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಂಕಣದಗೌರವ ಕಾರ್ಯದರ್ಶಿ ಮುರಲೀಧರ ಪ್ರಭು, ರೋಟರಿ ಹಾಗೂ ಕೊಂಕಣದ ಅವಿನಾಭಾವ ಸಂಬಂಧ ವಿವರಿಸಿ, ನಾವು ಅವರಿಗೆಉಪಕೃತರುಎಂದೂ, ಬಗ್ಗೋಣದ ಈ ಗುಡ್ಡಇನ್ನು ಸ್ವಲ್ಪ ವರ್ಷದಲ್ಲಿವಿದ್ಯಾದೇವತೆಯಹಸಿರುಗಿರಿಯಾಗಿ ಮಾರ್ಪಡುತ್ತದೆಎಂದು ಮಾರ್ಮಿಕವಾಗಿ ವಿವರಿಸಿದರು.
ವೇದಿಕೆಯಲ್ಲಿರೋಟರಿಅಧ್ಯಕ್ಷರಾದ ಶ್ರೀ ಸುರೇಶ ಭಟ್ಟಜೊತೆಗೆಜೀನರಾಜಜೈನ್, ಸತೀಶ ನಾಯಕ, ಜಿ.ಪಿ.ಕಾಮತ, ನವೀನಕುಮಾರ, ಹಾಗೂ ಕೊಂಕಣ ಟ್ರಸ್ಟಿಗಳಾದ ಅಶೋಕ ಪ್ರಭು, ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ವೈಭವಿ ಶಾನಭಾಗಧನ್ಯವಾದ ಸಮರ್ಪಿಸಿದಳು. ಶಿಕ್ಷಕ ಪ್ರಕಾಶಗಾವಡಿ ನಿರೂಪಿಸಿದರೆ, ವಿದ್ಯಾರ್ಥಿನಿ ಶಿಲ್ಪಾ ಸಂಗಡಿಗರು ಪರಿಸರಗೀತೆ ಹಾಡಿದರು. ವಂದೇ ಮಾತರಂಗೀತೆಯೊಂದಿಗೆಕಾರ್ಯಕ್ರಮ ಸಂಪನ್ನಗೊಂಡಿತು.