ಶಿರಸಿ : ಇಂದು ದೆಹಲಿಯ ರೈಲ್ವೇ ಭವನದಲ್ಲಿ ಮಾನ್ಯ ರೈಲ್ವೇ ಸಚಿವರಾದ ಶ್ರೀ ಸುರೇಶ ಅಂಗಡಿಯವರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭೇಟಿಮಾಡಿ ನಮ್ಮ ಜಿಲ್ಲೆಯ ತಾಳಗುಪ್ಪಾ – ಸಿದ್ದಾಪುರ ಹಾಗೂ ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗಗಳ ವಿಸ್ತರಣೆಗೆ ಮಂಜೂರಾತಿ ನೀಡುವ ಕುರಿತು ವಿವರವಾಗಿ ಚರ್ಚೆ ನಡೆಸಿದರು.

RELATED ARTICLES  ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ನಡೆಯುತ್ತಿದೆ 'ಶಂಕರ ಪಂಚಮಿ'

ಈ ಕುರಿತಂತೆ ಶ್ರೀ ಸುರೇಶ ಅಂಗಡಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಮಾರ್ಗಗಳ ವಿಸ್ತರಣೆಯ ಅನುಷ್ಟಾನಕ್ಕೆ ಇರುವ ತೊಂದರೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

RELATED ARTICLES  NEET ಪರೀಕ್ಷೆಯಲ್ಲಿ ಹೊನ್ನಾವರದ ಆದರ್ಶ ಎಸ್ ನಾಯ್ಕ ಸಾಧನೆ