ಸಾಹಿತ್ಯ ಸಂಗೀತದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ “ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ” ಇವರು ಉದಯೋನ್ಮುಖ ಕವಿಗಳನ್ನು ಉತ್ತೇಜಿಸುವ ಸಲುವಾಗಿ ಇದೀಗ ತಾನೆ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಯುವಕರು ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಕವನ ಸ್ಪರ್ಧೆ ಯನ್ನು ಆಯೋಜಿಸಿದೆ. ಕವನವನ್ನು ಅಂಚೆ ಕಾರ್ಡಿನ ಮೂಲಕವೇ ಕಳಿಸಬೇಕಿದ್ದು ಒಬ್ಬರು ಒಂದು ಕವನ ಮಾತ್ರ ಕಳಿಸಬಹುದಾಗಿದೆ.

RELATED ARTICLES  ಎಸ್​ಎಸ್​​ಎಲ್​ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ವೇಳಾಪಟ್ಟಿ

ಕವನ ಕಳಿಸಲು 2019 ಸೆಪ್ಟೆಂಬರ್ 10 ಕೊನೆಯ ದಿನವಾಗಿದ್ದು, ಅತ್ಯುತ್ತಮ ಎಂದು ಆಯ್ಕೆಯಾದ 5 ಜನ ಕವಿಗಳಿಗೆ ಪುಸ್ತಕ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ನಿನಾದ ಪ್ರಧಾನ ಸಂಚಾಲಕಿ ಶ್ರೀಮತಿ ರೇಷ್ಮಾ ಉಮೇಶ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES  ಚಂದ್ರಗ್ರಹಣ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ದೇವರ ದರ್ಶನ/ಪೂಜಾ ಸಮಯದಲ್ಲಿ ಬದಲಾವಣೆ


ಕವನ ಕಳಿಸುವ ವಿಳಾಸ
ಉಮೇಶ ಮುಂಡಳ್ಳಿ , ಸಂಚಾಲಕರು ನಿನಾದ ಸಾಹಿತ್ಯ ಸಂಗೀತ ಸಂಚಯ
‘ತೀರ್ಥ ನಿವಾಸ’ ಚಿತ್ರಾಪುರ ಅಂಚೆ
ಶಿರಾಲಿ ,ಭಟ್ಕಳ ತಾಲೂಕು 581320 ಉ.ಕ. ಜಿಲ್ಲೆ
ಮೊಬೈಲ್ ಸಂಖ್ಯೆ- 9945840552