ಕುಮಟಾ: ಇಲ್ಲಿಯ ಚಿತ್ರಿಗಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಬಾಡ ವಲಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 200 ಮೀ. ಓಟದಲ್ಲಿ ವಿನುತಾ ಪಟಗಾರ, ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ರಕ್ಷಿತಾ ಪೂಜಾರಿ, ಎತ್ತರ ಜಿಗಿತ ಮತ್ತು ಚಕ್ರ ಎಸೆತದಲ್ಲಿ ಮಹಾಲಕ್ಷ್ಮೀ ಗೌಡ, ಎತ್ತರ ಮತ್ತು ಉದ್ದ ಜಿಗಿತದಲ್ಲಿ ಸೌಮ್ಯ ಎಸ್.ನಾಯ್ಕ ವಿಜೇತರಾಗಿದ್ದಾರೆ. ಕಬಡ್ಡಿಯಲ್ಲಿ ಹುಡುಗರ ತಂಡ ವಿಜೇತರಾಗಿದ್ದು, ವ್ಹಾಲಿಬಾಲ್, ಥ್ರೋಬಾಲ್‍ನಲ್ಲೂ ಉತ್ತಮ ಪೈಪೋಟಿ ಪ್ರದರ್ಶನ ನೀಡಿರುತ್ತಾರೆ. ದೈಹಿಕ ಶಿಕ್ಷಕಿ ಚಂದ್ರಕಲಾ ಆಚಾರ್ಯ ಸಹಶಿಕ್ಷಕರ ಸಹಯೋಗದಲ್ಲಿ ತರಬೇತಿ ನೀಡುತ್ತಿದ್ದಾರೆ.

RELATED ARTICLES  ಪಟ ಶಾಲಾದಿಂದ ಡಿಜಿಟಲ್ ಕಲಿಕಾ ಸಾಮಗ್ರಿ ಕೊಡುಗೆ